ಭಟ್ಕಳ: ತಾಲ್ಲೂಕಿನ ಸಬ್ಬತ್ತಿ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಮೇಲೆ ಶನಿವಾರ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿ, ಆಟಕ್ಕೆ ಬಳಿಸಿದ ₹ 3.56 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಬೇಂಗ್ರೆ ಸಾರದಹೊಳೆಯ ನಿವಾಸಿ ಜಗದೀಶ ಮಾಸ್ತಿ ನಾಯ್ಕ (30), ಹಡೀಲ್ ನಿವಾಸಿ ಶಶಿಕಾಂತ ತಂದೆ ನಾಗೇಶ ನಾಯ್ಕ (26), ಸಬ್ಬತ್ತಿಯ ನಾರಾಯಣ ಕುಪ್ಪಯ್ಯ ನಾಯ್ಕ (35) ಬಂಧಿತ ಆರೋಪಿಗಳು.
ದಾಳಿ ವೇಳೆ ಓಡಿ ಹೋದ ತಲಾಂದ ನಿವಾಸಿ ಗಣಪತಿ ವಿಠ್ಠಲ, ಮುಟ್ಟಳ್ಳಿ ನಿವಾಸಿಗಳಾದ ಧನು ಮತ್ತು ಪ್ರದೀಪ, ಶಿರೂರು ನಿವಾಸಿಗಳಾದ ಸಂತೋಷ ಮತ್ತು ಸುಪ್ರೀತ ಹಾಗೂ ಬೈಂದೂರಿನ ನಿವಾಸಿ ರಾಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗ್ರಾಮೀಣ ಠಾಣಾ ಪಿಎಸ್‌ಐ ಮಂಜುನಾಥ ಅವರ ನೇತೃತ್ವದಲ್ಲಿ ಠಾಣಾ ಪಿಎಸ್‌ಐ ಭರಮಪ್ಪ ಬೆಳಗಲಿ, ಎಎಸ್ಐ ರಾಜೇಶ ಕೊರ್ಗ, ಸಿಬ್ಬಂದಿ ನಿಂಗನಗೌಡ ಪಾಟೀಲ, ಮಂಜುನಾಥ ಖಾರ್ವಿ, ಈರಣ್ಣ ಪೂಜಾರಿ, ಅಕ್ಷತ ಅವಜಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.