
ಭಟ್ಕಳ: ಪಟ್ಟಣದ ರಂಗಿನಕಟ್ಟೆ ಬಳಿ ಶನಿವಾರ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ವಶಪಡಿಸಿಕೊಂಡು ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮಗ್ದುಂ ಕಾಲೊನಿಯ ಸಫಾ ಸ್ಟ್ರೀಟ್ ನಿವಾಸಿ ಆಸೀಫ್ ಉಲ್ಲಾ ಅಬ್ದುಲ ರಹೀಮ್ ಸಾಐ (38), ಪುರವರ್ಗ ಗಣೇಶ ನಗರ ನಿವಾಸಿ ಮೊಹಮ್ಮದ ಸಮೀರ ಮೊಹಮ್ಮದ್ ಭಾಷಾ ( 29) ಹಾಗೂ ಹನುಮಾನ ನಗರ ನಿವಾಸಿ ರಾಮಚಂದ್ರ ಮಾಸ್ತಪ್ಪ ನಾಯ್ಕ (53) ಆರೋಪಿಗಳು.
ಆರೋಪಿಗಳು ಯಾವುದೇ ಅಧಿಕೃತ ದಾಖಲೆ ಅಥವಾ ಬಿಲ್ ಇಲ್ಲದೆ ಮಾರುತಿ ಓಮ್ನಿ ವಾಹನದಲ್ಲಿ ಸುಮಾರು 1,150 ಕೆ.ಜಿ.ಅಕ್ಕಿಯನ್ನು ಸಾಗಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.