ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ‘24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಪೋಟಿಸುತ್ತೇವೆ’ ಎಂಬ ಬೆದರಿಕೆ ಇ–ಮೇಲ್ ಸಂದೇಶ ಇಲ್ಲಿನ ಶಹರ ಪೊಲೀಸ್ ಠಾಣೆಗೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ಪಟ್ಟಣ ಸೇರಿ ಮುರುಡೇಶ್ವರದಲ್ಲಿ ತಪಾಸಣೆ ನಡೆಸಿದರು.
‘ಕಣ್ಣನ್ ಗುರುಸ್ವಾಮಿ ಎಂಬ ವ್ಯಕ್ತಿಯ ಹೆಸರಿನ ಇ–ಮೇಲ್ ಖಾತೆಯಿಂದ ಸಂದೇಶ ಬಂದಿದೆ. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಬಿಗಿಭದ್ರತೆ ಮಾಡಲಾಗಿತ್ತು. ಇ–ಮೇಲ್ ಕಳುಹಿಸಿದವರ ಪತ್ತೆಗೆ ಎರಡು ತಂಡ ರಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.