ಭಟ್ಕಳ: ‘ಅಯೋಧ್ಯೆಯ ಅಂಕ್ವಾರ್ ಸಮೀಪದ ಭರತ್ ಕುಂಡ ರಸ್ತೆಯಲ್ಲಿರುವ ಧರ್ಮಸ್ಥಳದ ಕನ್ಯಾಡಿಯ ರಾಮಕ್ಷೇತ್ರ ಮಹಾಸಂಸ್ಥಾನದ ನೂತನ ಶಾಖಾ ಮಠವನ್ನು ಸೋಮವಾರ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಮ್ಮುಖದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ಎಸ್. ವೈದ್ಯ ಭೂಮಿಪೂಜೆ ನೆರವೇರಿಸಿದರು.
ಉತ್ತರಭಾರತ ಜುನಾ ಆಖಾಡದ ಆಚಾರ್ಯ ಮಹಾಮಂಡಲೇಶ್ವರ 1008 ಅವದೇಶಾನಂದರು, ಮಹಂತ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ರಾಹೋಪಾಲಿ ಅಯೋಧ್ಯೆಯ ಮಹಂತ ಡಾ. ಸ್ವಾಮಿ ಭರತ್ ದಾಸರು, ಹರಿದ್ವಾರದ ಜುನಾ ಆಖಾಡದ ಮಹಂತ ದೇವಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯ ದಿಗಂಬರ ಅಖಾಡದ ಮಹಂತ ಸುರೇಶ್ ದಾಸರು ಸೇರಿ ಹಲವು ಸ್ವಾಮಿಗಳು, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಅಯೋಧ್ಯೆ ನಗರ ಶಾಸಕ ವೇದ ಪ್ರಕಾಶ್ ಗುಪ್ತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.