
ಹೊನ್ನಾವರ: ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದು ಇದೇ ಮೊದಲ ಬಾರಿಗೆ ಚುನಾವಣೆ ನಡೆದ ಮಂಕಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಪಟ್ಟಣ ಪಂಚಾಯಿತಿಯ 20 ವಾರ್ಡ್‌ಗಳ ಪೈಕಿ 12 ಸ್ಥಾನಗಳನ್ನು ಬಿಜೆಪಿ ಪಡೆದಿದ್ದರೆ, ಕಾಂಗ್ರೆಸ್ 8 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಡಿ.21ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಲ್ಲಿ ಬುಧವಾರ ನಡೆಯಿತು. ವಿಜಯ ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
20 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಕಾಂಗ್ರೆಸ್ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣೆ ನಡೆದ 18 ಸ್ಥಾನಗಳಲ್ಲಿ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 12 ಸ್ಥಾನಗಳನ್ನು ಬಾಚಿಕೊಂಡಿದೆ. ಈ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದೆ.
ಪಟ್ಟಣ ಪಂಚಾಯಿತಿ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ–ಕಾಂಗ್ರೆಸ್ ನೇರ ಎದುರಾಳಿಗಳಾಗಿದ್ದರು. ಕೆಲ ವಾರ್ಡ್‌ಗಳಲ್ಲಿ ಪಕ್ಷೇತರರು ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇತ್ತಾದರೂ, ಪಕ್ಷೇತರರ ಪೈಕಿ ಯಾರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಗೆಲುವಿನ ಬಳಿಕ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸಿದ ಬಿಜೆಪಿ ಮುಖಂಡರಾದ ಮಾಜಿ ಶಾಸಕ ಸುನೀಲ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಗ್ರಾಮ ಪಂಚಾಯಿತಿ ಆಗಿದ್ದ ಮಂಕಿಯನ್ನು 2020ರ ನವೆಂಬರ್‌ನಲ್ಲಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸಲಾಗಿತ್ತು.
ಚುನಾವಣೆಯಲ್ಲಿ ವಿಜಯಶಾಲಿಯಾದವರು, ಪರಾಜಿತರ ವಿವರ
ಕ್ರ.ಸಂ;ವಾರ್ಡ್;ಗೆದ್ದ ಅಭ್ಯರ್ಥಿ;ಪಡೆದ ಮತ;ಪರಾಜಿತ ಅಭ್ಯರ್ಥಿ;ಪಡೆದ ಮತ
01; ಮಡಿ; ಜ್ಯೋತಿ ಸತೀಶ ಖಾರ್ವಿ (ಬಿಜೆಪಿ); 407; ಸುನಿತಾ ಗಣಪತಿ ಖಾರ್ವಿ (ಕಾಂಗ್ರೆಸ್); 305
02; ದೇವರಗದ್ದೆ; ಮೀನಾಕ್ಷಿ ಕೃಷ್ಣ ಹಸ್ಲರ್ (ಬಿಜೆಪಿ) 297; ಗೋವಿಂದ ಸಣ್ಣು ಗೌಡ (ಕಾಂಗ್ರೆಸ್); 237
03; ಹಳೇಮಠ; ಆನಂದ ಗಣಪತಿ ನಾಯ್ಕ (ಬಿಜೆಪಿ); 276; ದತ್ತಾತ್ರಯ ಮಾದೇವ ನಾಯ್ಕ (ಕಾಂಗ್ರೆಸ್) 220
04; ನವಾಯತಕೇರಿ; ರೇಷ್ಮಾ ಸಾಲ್ವನ್ ಫರ್ನಾಂಡಿಸ್ (ಕಾಂಗ್ರೆಸ್); ಅವಿರೋಧ
05; ಕಟ್ಟೆ ಅಂಗಡಿ;ಮಹ್ಮದ್ ಸಿದ್ದಿಕ್ ಹಸನ್ ಬಾಪು (ಕಾಂಗ್ರೆಸ್); ಅವಿರೋಧ
06; ನಾಖುದಾ ಮೊಹಲ್ಲಾ; ರಹಮುತುಲ್ಲಾ ಇಸ್ಮಾಯಿಲ್ ಬೊಟ್ಲೆರ್ ( ಕಾಂಗ್ರೆಸ್); 435; ಧರ್ಮ ಗಣಪತಿ ಖಾರ್ವಿ (ಬಿಜೆಪಿ) 33
07; ಬಣಸಾಲೆ; ಸವಿತಾ ಮಲ್ಲಯ್ಯ ನಾಯ್ಕ (ಬಿಜೆಪಿ); 220; ಸುಮತಿ ಶ್ರೀಧರ ನಾಯ್ಕ (ಕಾಂಗ್ರೆಸ್); 188
08; ದಾಸನಮಕ್ಕಿ;ಪೀಟರ್ ರೊಡ್ರಗಿಸ್ ಸಾಂತಾ (ಬಿಜೆಪಿ); 287; ಎಂ.ಆರ್.ಶಾಂತಕುಮಾರ ಜೈನ್ (ಕಾಂಗ್ರೆಸ್);240
09; ಹೊಸಹಿತ್ಲ; ಗೀತಾ ರಮಾಕಾಂತ ಹರಿಕಂತ್ರ (ಬಿಜೆಪಿ); 472; ರಮ್ಯಾ ಅರುಣ ಹರಿಕಂತ್ರ (ಕಾಂಗ್ರೆಸ್); 190
10; ದೊಡ್ಡಗುಂದ; ಗಜಾನನ ಬಾಲಯ್ಯ ನಾಯ್ಕ (ಕಾಂಗ್ರೆಸ್); 376; ಆಶಾ ಗಜಾನನ ನಾಯ್ಕ (ಬಿಜೆಪಿ); 132
11; ಗುಳದಕೇರಿ; ಸತೀಶ ದೇವಪ್ಪ ನಾಯ್ಕ (ಬಿಜೆಪಿ); 282; ರಾಜು ಮಂಜುನಾಥ ನಾಯ್ಕ (ಕಾಂಗ್ರೆಸ್); 248
12; ಗುಳದಕೇರಿ; ಸಂಜೀವ ಗಂಗಾಧರ ನಾಯ್ಕ (ಕಾಂಗ್ರೆಸ್); 272; ಮಹೇಶ ಪರಮೇಶ್ವರ ನಾಯ್ಕ (ಪಕ್ಷೇತರ) 242
13.ಚಿತ್ತಾರ; ರೇಖಾ ಗಿರೀಶ ನಾಯ್ಕ (ಬಿಜೆಪಿ); 548; ಪದ್ಮಾವತಿ ಧರ್ಮ ನಾಯ್ಕ(ಕಾಂಗ್ರೆಸ್)-241
14.ಗಂಜಿಕೇರಿ; ನೇತ್ರಾವತಿ ಈಶ್ವರ ಗೌಡ(ಬಿಜೆಪಿ); 223; ಭಾರತಿ ನಾಗೇಶ ಗೌಡ(ಕಾಂಗ್ರೆಸ್); 177
15.ಸಾರಸ್ವತಕೇರಿ; ರವಿ ಉಮೇಶ ನಾಯ್ಕ (ಬಿಜೆಪಿ); 592; ನಾಗರಾಜ ಗಣಪತಿ ನಾಯ್ಕ (ಪಕ್ಷೇತರ); 224
16.ಬಾಲಯ್ಯನವಾಡೆ; ಉಲ್ಲಾಸ ಅಂಗದ ನಾಯ್ಕ (ಕಾಂಗ್ರೆಸ್); 155; ಮಹಾಬಲೇಶ್ವರ ನಾಯ್ಕ (ಪಕ್ಷೇತರ); 118
17.ತಾಳಮಕ್ಕಿ; ಉಷಾ ಕೃಷ್ಣ ನಾಯ್ಕ (ಕಾಂಗ್ರೆಸ್); 397; ವನಿತಾ ಮಹಾಬಲೇಶ್ವರ ನಾಯ್ಕ (ಬಿಜೆಪಿ); 289
18.ಬೋಳಬಸ್ತಿ; ವಿಜಯಾ ಮೋಹನ ನಾಯ್ಕ (ಬಿಜೆಪಿ); 388; ಅಶ್ವಿನಿ ಉಲ್ಲಾಸ ನಾಯ್ಕ (ಕಾಂಗ್ರೆಸ್); 248
19.ಕೊಪ್ಪದಮಕ್ಕಿ; ವಿನಾಯಕ ಮೊಗೇರ(ಕಾಂಗ್ರೆಸ್); 299; ಸುರೇಶ ವೆಂಕಟ್ರಮಣ ಮೊಗೇರ(ಪಕ್ಷೇತರ); 192
20.ಅನಂತವಾಡಿ; ಸವಿತಾ ಹನುಮಂತ ನಾಯ್ಕ (ಬಿಜೆಪಿ); 344; ಶಿಲ್ಪಾ ರವಿದಾಸ ನಾಯ್ಕ(ಕಾಂಗ್ರೆಸ್); 277
ಸಚಿವರಿಗೆ ಮುಖಭಂಗ!
‘ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮೂಲಕ ಸಚಿವ ಮಂಕಾಳ ವೈದ್ಯ ಅವರು ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪಟ್ಟಣ ಪಂಚಾಯಿತಿಯಲ್ಲೇ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ವಿಫಲವಾಗಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು ಆಡಳಿತಾರೂಢ ಕಾಂಗ್ರೆಸ್ ಹಿನ್ನೆಡೆ ಸಾಧಿಸಿದೆ. ಸಚಿವರ ವರ್ಚಸ್ಸು ಚುನಾವಣೆಯಲ್ಲಿ ಪ್ರಭಾವ ಬೀರಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ರಾಜಕೀಯ ಮುಖಂಡರೊಬ್ಬರು ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.