ADVERTISEMENT

ಕಾರವಾರ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ರಕ್ತದಲ್ಲಿ ಪತ್ರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 8:43 IST
Last Updated 1 ಆಗಸ್ಟ್ 2022, 8:43 IST
   

ಕಾರವಾರ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ, ವಿವಿಧ ಸಂಘಟನೆಗಳು ರಕ್ತದಲ್ಲಿ ಪತ್ರಗಳನ್ನು ಬರೆಯುವ ಅಭಿಯಾನ ಹಮ್ಮಿಕೊಂಡವು. ಅಂಚೆ ಪತ್ರಗಳಲ್ಲಿ ಬರೆದು, ಅವುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗುತ್ತಿದೆ.

ನಗರದ ಗಾಂಧಿ ಉದ್ಯಾನದಲ್ಲಿ ಮಹಾತ್ಮ ಗಾಂಧಿ, ಶಿವಾಜಿ ಮತ್ತು ಹೆಂಜಾ ನಾಯ್ಕ ಅವರ ಪತ್ರಿಮೆಗಳಿಗೆ ಮಾಲಾರ್ಪಣೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾಜುಬಾಗದ ಮಹಿಳೆ 85 ವರ್ಷದ ಅಜ್ಮತ್‌ಬಿ ಮೊದಲಿಗರಾಗಿ ರಕ್ತದಲ್ಲಿ ಪತ್ರ ಬರೆದರು.

ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಸಂಘಟನೆಯ ಅಧ್ಯಕ್ಷ ರಾಘು ನಾಯ್ಕ ಮಾತನಾಡಿ, ‘ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಕೊರತೆಯಿಂದಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಮತ್ತೆಷ್ಟು ಜೀವ ಹೋಗಬೇಕು? ಜಿಲ್ಲೆಯಲ್ಲಿ ಆಸ್ಪತ್ರೆ ಸ್ಥಾಪನೆ ಮಾಡಲೇಬೇಕು’ ಎಂದು ಒತ‌್ತಾಯಿಸಿದರು.

ADVERTISEMENT

ವಿವಿಧ ಸಂಘಟನೆಗಳು, ಹಿರಿಯ ಪ್ರಮುಖರಾದ ಜಾರ್ಜ್ ಫರ್ನಾಂಡಿಸ್, ಕೆ.ಡಿ.ಪೆಡ್ನೇಕರ್, ಸುನಿಲ್ ಸೋನಿ, ಗಿರೀಶ ರಾವ್, ಪ್ರಶಾಂತ ರೇವಣಕರ್, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.