ಯಲ್ಲಾಪುರ: ‘ಅಡಿಕೆ ಬೆಳೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ ರೋಗಬಾಧೆಯಿಂದ ರೈತರು ಕಂಗಾಲಾಗುತ್ತಿದ್ದಾರೆ’ ಎಂದು ಶಿರಸಿಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಪಿ. ಸತೀಶ ಹೇಳಿದರು.
ತೋಟಗಾರಿಕಾ ಇಲಾಖೆ, ಶ್ರೀದೇವಿ ಸೇವಾ ರೈತ ಉತ್ಪಾದಕ ಕಂಪನಿ ಮತ್ತು ಮಾವಿನಮನೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ತಾಲ್ಲೂಕಿನ ಮಲವಳ್ಳಿಯ ಸಭಾಭವನದಲ್ಲಿ ಸೋಮವಾರ ನಡೆದ ರೈತ ಸಮಾವೇಶ ಹಾಗೂ ಎಲೆಚುಕ್ಕಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದೊಂದಿಗೆ ರೈತರು ವಾಣಿಜ್ಯ ಬೆಳೆ ಮತ್ತು ಸಾಂಪ್ರದಾಯಿಕ ಬೆಳೆ ಎರಡನ್ನೂ ಉಳಿಸಿಕೊಂಡು ಹೋಗಬಹುದಾಗಿದೆ. ಅಡಿಕೆಗೆ ಪರ್ಯಾಯ ಬೆಳೆಯಾಗಿ ತಾಳೆಯನ್ನು ಬೆಳೆಯಬಹುದು’ ಎಂದರು.
ಶ್ರೀದೇವಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸುಬ್ರಹ್ಮಣ್ಯ ಗಾಂವ್ಕರ ಅಧ್ಯಕ್ಷತೆ ವಹಿಸಿ, ‘ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯಬೇಕು. ಪರಾಂಪರಾಗತ ಕೃಷಿಯನ್ನೂ ಉಳಿಸಿಕೊಂಡು ಹೋಗಬೇಕು’ ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಕುಂಟೆಕಳಿ, ಮಾವಿನಮನೆ ಸೊಸೈಟಿ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಕೃಷಿತಜ್ಞ ರವಿ ಭಟ್ಟ ಮಾತನಾಡಿದರು.
ಪ್ರಮುಖರಾದ ರವಿ ಹುಳ್ಸೆ, ಸದಾನಂದ ಭಟ್, ಸುಬ್ಬಯ್ಯ ಧೊಗಳೆ, ಅಕ್ಷಯ ಗಾಂವ್ಕರ, ಮಾಬ್ಲೇಶ್ವರ ಭಟ್, ಗಣಪತಿ ಮುದ್ದೇಪಾಲ, ಎನ್.ಕೆ. ಭಟ್ ಮೆಣಸುಪಾಲ, ಗಜಾನನ ಭಟ್ ಕಳಚೆ, ನಾಗರಾಜ ಭಟ್ ಚಿಮ್ನಳ್ಳಿ ಇದ್ದರು.
ಜಿಲ್ಲೆಯಲ್ಲಿ ಜೇನು ಕೃಷಿ ತಾಳೆ ಕೃಷಿ ಭತ್ತ ಬೆಳೆಗೆ ಉತ್ತಮ ವಾತಾವರಣವಿದೆ. ರೈತರು ಇದನ್ನು ಬಳಸಿಕೊಳ್ಳಬೇಕುರೂಪಾ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.