ADVERTISEMENT

'ಸೆಲ್ಫಿ' ತೆಗೆಯುವಾಗ ನದಿಗೆ ಬಿದ್ದ ಪ್ರೇಮಿಗಳ ಮೃತದೇಹಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 6:46 IST
Last Updated 13 ಏಪ್ರಿಲ್ 2021, 6:46 IST
ಜೊಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ಕಾಳಿ ನದಿಗೆ ಬಿದ್ದ ಯುವಕ ಮತ್ತು ಯುವತಿಯ ಶೋಧ ಕಾರ್ಯದಲ್ಲಿ ರ‍್ಯಾಫ್ಟಿಂಗ್ ತಂಡದ ಸದಸ್ಯರು ನಿರತರಾಗಿರುವುದು
ಜೊಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ಕಾಳಿ ನದಿಗೆ ಬಿದ್ದ ಯುವಕ ಮತ್ತು ಯುವತಿಯ ಶೋಧ ಕಾರ್ಯದಲ್ಲಿ ರ‍್ಯಾಫ್ಟಿಂಗ್ ತಂಡದ ಸದಸ್ಯರು ನಿರತರಾಗಿರುವುದು   

ಜೊಯಿಡಾ: ತಾಲ್ಲೂಕಿನ ಗಣೇಶಗುಡಿಯಲ್ಲಿ ಸೇತುವೆಯ ಮೇಲೆ ಸೋಮವಾರ ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕಾಳಿ ನದಿಗೆ ಬಿದ್ದ ಪ್ರೇಮಿಗಳ ಮೃತದೇಹಗಳು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಸೋಮವಾರ ಸಂಜೆಯಿಂದಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಯುವಕ ಯುವತಿಯ ಹುಡುಕಾಟ ಮದಲ್ಲಿ ನಿರತರಾಗಿದ್ದರು. ಮಂಗಳವಾರ ಗಣೇಶಗುಡಿಯ ಫ್ಲೈ ಕ್ಯಾಚರ್ ರೆಸಾರ್ಟ್ ಸಿಬ್ಬಂದಿ ಸಹಕಾರದಿಂದ ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆ ತರಲಾಯಿತು.

ಯುವತಿಯನ್ನು ಬೀದರ್‌ನ ರಕ್ಷಿತಾ ಎಂದು ಗುರುತಿಸಲಾಗಿದೆ. ಅವರು ಕಲಬುರ್ಗಿಯಲ್ಲಿಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು. ಯುವಕ ಕೂಡ ಬೀದರ್‌ನವರಾಗಿದ್ದು, ಪರುಷೋತ್ತಮ ಪಾಟೀಲ ಎಂದು ಗುರುತಿಸಲಾಗಿದೆ. ಅವರು ಬೀದರ್‌ನ ಕರ್ನಾಟಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ADVERTISEMENT

ಸ್ಥಳಕ್ಕೆ ಯುವತಿಯ ಕುಟುಂಬದವರು ಬಂದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ.ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಇದು ಸಹಜ ಸಾವೇ ಅಥವಾ ಆತ್ಮಹತ್ಯೆಯೇ ಎಂದು ತಿಳಿದು ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.