
ಭಟ್ಕಳ: ‘ಸಮುದಾಯದೊಂದಿಗೆ ಬದುಕುವುದನ್ನು ಕಲಿತಾಗ ಉತ್ತಮ ಶಿಕ್ಷಕರಾಗಲು ಸಾಧ್ಯ’ ಎಂದು ಬೈಂದೂರು ಪಟ್ಟಣ ಪಂಚಾಯಿತಿ ಸದಸ್ಯ ಸದಾಶಿವ ಡಿ. ಹೇಳಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಮುಲ್ಲಿಬಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈಚೆಗೆ ಆಯೋಜಿಸಿದ್ದ ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಶಿಕ್ಷಕರು, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಬದುಕಿನ ಪಾಠ ಕಲಿಸಬೇಕು. ಇದಕ್ಕಾಗಿ ಸಮುದಾಯದೊಂದಿಗೆ ಬೆರೆಯಬೇಕು. ಆಗ ಮಾತ್ರ ಉತ್ತಮ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ’ ಎಂದು ಹೇಳಿದರು.
ಬೈಂದೂರಿನ ರಂಗಕರ್ಮಿ ಸತ್ಯನಾ ಕೊಡೇರಿ ಅವರು ‘ರಂಗಗೀತೆಗಳು ಮತ್ತು ಲಲಿತಕಲೆ’, ಪತ್ರಕರ್ತ ಅರುಣಕುಮಾರ್ ಅವರು ‘ನಾಗರಿಕತೆ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ಮಾಧ್ಯಮದ ಪಾತ್ರ’, ರತ್ತುಬಾಯಿ ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ಆನಂದ ಮದ್ದೋಡಿ ಅವರು ‘ಶಿಕ್ಷಕರಿಂದ ಶ್ರೇಷ್ಠ ಸಮಾಜ ನಿರ್ಮಾಣ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರಾಂಶುಪಾಲ ವೀರೇಂದ್ರ ವಿ. ಶಾನಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಶಾಲೆಯ ಮುಖ್ಯಶಿಕ್ಷಕ ಮಹಾಬಲೇಶ್ವರ ಎಸ್., ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಮರಾಠಿ, ಉಪನ್ಯಾಸಕ ನಾಗರಾಜ ಮಡಿವಾಳ, ರಶ್ಮಿ, ನಮ್ರತಾ, ನಿಶ್ಚಿತಾ, ಗಣೇಶ, ಗಜಾನನ ಶಾಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.