ADVERTISEMENT

ದಾಂಡೇಲಿ: ಸಿಇಟಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಮೇ 2023, 11:34 IST
Last Updated 19 ಮೇ 2023, 11:34 IST
ದಾಂಡೇಲಿಯ ಬಂಗೂರುನಗರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಲಾಗಿದೆ.
ದಾಂಡೇಲಿಯ ಬಂಗೂರುನಗರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಲಾಗಿದೆ.   

ದಾಂಡೇಲಿ: ನಗರದ ಬಂಗೂರುನಗರ ಪದವಿ ಪೂರ್ವ ಕಾಲೇಜಿನಲ್ಲಿ ಹಳಿಯಾಳ ತಾಲ್ಲೂಕಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2023ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ, ಬಿಎಸ್ಸಿ ನರ್ಸಿಂಗ್ ಮುಂತಾದ ವೃತ್ತಿ ಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶಕ್ಕೆ ನಡೆಯಲಿರುವ ಈ ಪರೀಕ್ಷೆಗೆ ತಾಲ್ಲೂಕಿನ ದಾಂಡೇಲಿಯ ಬಂಗೂರನಗರ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶನಿವಾರ ಬೆಳಿಗ್ಗೆ ಜೀವಶಾಸ್ತ್ರ, ಗಣಿತ, 10.30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.50ರವರೆಗೆ ನಡೆಯಲಿದೆ. ಕಾಲೇಜಿನ 18 ವರ್ಗದ ಕೋಣೆಯಲ್ಲಿ ಒಟ್ಟು 424 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಭಾನುವಾರ ಭೌತಶಾಸ್ತ್ರ, ರಸಾಯನ ಶಾಸ್ತ್ರ ವಿಷಯದ ಪರೀಕ್ಷೆ
ನಡೆಯಲಿದೆ.

ADVERTISEMENT

ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆಯನ್ನು ಕಾಲೇಜಿನ ಪ್ರಾಚಾರ್ಯೆ ಆಶಾಲತಾ ಜೈನ್ ವಹಿಸಲಿದ್ದಾರೆ. ಪರೀಕ್ಷಾ ಸಿಬ್ಬಂದಿಯಾಗಿ ಎನ್.ವಿ.ಪಾಟೀಲ, ಶ್ರೀಮಂತ ಮದರಿ ಹಾಗೂ ಸಹಾಯಕರಾಗಿ ಮಂಜುನಾಥ ನರಸನ್ನವರ, ಚೇತನ್, ನಾಗರತ್ನ ಸಹಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.