ADVERTISEMENT

ಮುಂಡಗೋಡ: ಟಿಬೆಟನ್ ಕ್ಯಾಂಪ್‌ನ ಅಡುಗೆ ಸಹಾಯಕಿಗೆ ಕೋವಿಡ್-19 ದೃಢ

ಮಹಿಳೆಗೆ ಯಾವುದೇ ಪ್ರಯಾಣದ ವಿವರ ಇಲ್ಲ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 11:06 IST
Last Updated 24 ಜೂನ್ 2020, 11:06 IST
ಮುಂಡಗೋಡ ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ನಲ್ಲಿ ಸೋಂಕಿತೆಯ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು
ಮುಂಡಗೋಡ ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ನಲ್ಲಿ ಸೋಂಕಿತೆಯ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು   

ಮುಂಡಗೋಡ: ತಾಲ್ಲೂಕಿನ ಟಿಬೆಟನ್ ಕ್ಯಾಂಪ್ ನಂ.3ರ ಟಿಸಿವಿ ವಸತಿ ನಿಲಯದಲ್ಲಿ ಅಡುಗೆ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ಮಹಿಳೆಗೆ ಬುಧವಾರ ಕೋವಿಡ್-19 ದೃಢಪಟ್ಟಿದೆ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

ಇದೇ ವಸತಿ ನಿಲಯದಲ್ಲಿ ದೆಹಲಿಯಿಂದ ಬಂದು ಕ್ವಾರಂಟೈನ್ ಆಗಿದ್ದ 30 ವರ್ಷದ ಪುರುಷನಿಗೆ ಪಿ 7374 ಜೂ.16ರಂದು ಕೋವಿಡ್ 19 ಸೋಂಕು ಇರುವುದು ದೃಢವಾಗಿತ್ತು. ಈಗ ಕೋವಿಡ್ 19 ದೃಢವಾಗಿರುವ ಮಹಿಳೆಗೆ ಯಾವುದೇ ಪ್ರಯಾಣದ ವಿವರ ಇಲ್ಲ. ಪಿ-7374 ಪ್ರಾಥಮಿಕ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಸದ್ಯಕ್ಕೆ ಅಂದಾಜಿಸಲಾಗಿದೆ. ಸೋಂಕಿತೆಯು ಲಕ್ಷಣರಹಿತವಾಗಿದ್ದು, ಅವರ ಕುಟುಂಬ ಸದಸ್ಯರು ಹಾಗೂ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಇದೇ ವಸತಿನಿಲಯದಲ್ಲಿ 56 ಜನರು ಕ್ವಾರಂಟೈನ್‌ನಲ್ಲಿ ಇದ್ದಾರೆ. ಹಲವರ ವರದಿ ನೆಗೆಟಿವ್ ಬಂದಿದೆ. ತಹಶೀಲ್ದಾರ್ ಶ್ರೀಧರ ಮುಂದಲಮನಿ, ತಾಲ್ಲೂಕುಆರೋಗ್ಯಾಧಿಕಾರಿ ನರೇಂದ್ರ ಪವಾರ್, ತಾಲ್ಲೂಕುಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್. ಇಂಗಳೆ, ಡೊಗುಲಿಂಗ್ ಸೆಟ್ಲಮೆಂಟ್ ಚೇರಮನ್ ಲಾಖ್ಪಾ ಸಿರಿಂಗ್ ಟಿ.ಸಿ.ವಿ ವಸತಿ ನಿಲಯಕ್ಕೆ ಭೇಟಿ ನೀಡಿ ಸೋಂಕಿತ ಮಹಿಳೆಯನ್ನು ಕಾರವಾರ ಆಸ್ಪತ್ರೆಗೆ ಕಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.