
ಪ್ರಜಾವಾಣಿ ವಾರ್ತೆ
ಮಗು (ಪ್ರಾತಿನಿಧಿಕ ಚಿತ್ರ)
ಭಟ್ಕಳ: ಸಮೀಪದ ಜಾಲಿಯಲ್ಲಿರುವ ಖಾಸಗಿ ರೆಸಾರ್ಟ್ ಈಜುಕೋಳದಲ್ಲಿ ಆಟವಾಡುತ್ತಿದ್ದ ಮಗುವೊಂದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಜಾಲಿ ಪಟ್ಟಣದ ಆಝಾದ ನಗರ ನಿವಾಸಿ ಮಸ್ತಕೀಮ್ ಶಾಹಿದ್ ಉಲ್ಲಾ ಶೇಖ್(05) ಮೃತ ಬಾಲಕ. ಮೃತ ಬಾಲಕ ತಾಯಿ ಜೊತೆ ಪ್ರವಾಸಕ್ಕೆ ತೆರಳಿದ್ದು, ಮಕ್ಕಳ ಜೊತೆ ಆಟವಾಡುವಾಗ ಕಾಲು ಜಾರಿ ಕೋಳದಲ್ಲಿ ಬಿದ್ದು ಮೃತಪಟ್ಟಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.