ADVERTISEMENT

ಕ್ರೈಸ್ತರಲ್ಲಿ ಮನೆ ಮಾಡಿದ ಕ್ರಿಸ್‌ಮಸ್ ಸಂಭ್ರಮ

ಚರ್ಚ್‌ಗಳಲ್ಲಿ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ: ಕೇಕ್ ಹಂಚಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 12:30 IST
Last Updated 25 ಡಿಸೆಂಬರ್ 2018, 12:30 IST
ಶಿರಸಿಯ ಸೇಂಟ್ ಪೌಲ್ಸ್ ಮಾರ್ಥೋಮಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಅಂಗವಾಗಿ ರಚಿಸಲಾದ ಗೋದಲಿ 
ಶಿರಸಿಯ ಸೇಂಟ್ ಪೌಲ್ಸ್ ಮಾರ್ಥೋಮಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಅಂಗವಾಗಿ ರಚಿಸಲಾದ ಗೋದಲಿ    

ಶಿರಸಿ:ನಗರದ ವಿವಿಧೆಡೆ ಮಂಗಳವಾರಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಯೇಸುಕ್ರಿಸ್ತರ ಜನ್ಮದಿನದ ಸಡಗರಕ್ರೈಸ್ತರ ಮನೆ ಮನೆಗಳಲ್ಲಿ ತುಂಬಿತ್ತು.

ಕ್ರಿಸ್‍ಮಸ್ ಟ್ರೀ ನೆಟ್ಟು, ಅದನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮನೆಯ ಒಳಗೆ, ಹೊರಗೆ ದೀಪಗಳ ಅಲಂಕಾರ, ನಕ್ಷತ್ರಾಕಾರದ ಗೂಡುದೀಪಗಳಿಂದಮನೆಗಳನ್ನು ಸಿಂಗರಿಸಲಾಗಿತ್ತು.

ಕ್ರೈಸ್ತರು ಹೊಸ ಬಟ್ಟೆ ತೊಟ್ಟು ಕೇಕ್ ಹಂಚಿ ಸಂಭ್ರಮಿಸಿದರು. ಹಬ್ಬದ ನಿಮಿತ್ತ ನಗರದ ಎಲ್ಲ ಚರ್ಚ್‍ಗಳಲ್ಲಿ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.ಅಲ್ಲದೇ ಚರ್ಚ್‌ಗಳಆವರಣದಲ್ಲಿ ಗೋದಲಿಗಳನ್ನು ನಿರ್ಮಿಸಿ ಅವುಗಳಲ್ಲಿಬೊಂಬೆಗಳು, ಕುರಿಗಳು, ಹುಲ್ಲುಗಾವಲಿನ ಮಾದರಿಗಳನ್ನು ರಚಿಸಲಾಗಿದೆ. ಯೇಸು ಜನಿಸಿದ ಗುಡಿಸಲು,ಬಾಲ ಯೇಸುವಿನ ಪ್ರತಿಕೃತಿಗಳನ್ನೂ ಸ್ಥಾಪಿಸಲಾಗಿದೆ.

ADVERTISEMENT

ಕೇಕ್‌ಗಳ ಆಕರ್ಷಣೆ:ಕ್ರಿಸ್‍ಮಸ್ ಹಬ್ಬದ ನಿಮಿತ್ತ ವಿಶೇಷ ಕೇಕ್‍ಗಳನ್ನು ಹಂಚಲಾಯಿತು. ಪ್ರಸಿದ್ಧ ತಾಣ, ಅರಮನೆ, ಕಟ್ಟಡಗಳನ್ನು ಹೋಲುವ ಬೃಹದಾಕಾರದ ಕೇಕ್‍ಗಳು ಆಕರ್ಷಕವಾಗಿದ್ದವು.

ಸೇಂಟ್ ಪೌಲ್ಸ್ ಮಾರ್ಥೋಮಾ ಚರ್ಚ್‌ನ ಧರ್ಮಗುರುರೆವರೆಂಡ್ ಫಾದರ್ ಜಾನ್ಸನ್ ಥಾಮಸ್ ಉನ್ನಿಥಾನ್ ಕ್ರಿಸ್‌ಮಸ್ ಸಂದೇಶವಾಚಿಸಿದರು.

‘ಯೇಸು ವಿಶ್ವಮಾನವರಾಗಿ ಎಲ್ಲರ ಉದ್ಧಾರಕ್ಕಾಗಿ ಧರೆಗೆ ಬಂದವರು. ಪ್ರೀತಿಯೇ ದೇವರು. ಪ್ರತಿಯೊಬ್ಬರೂದೇವರ ಸ್ವರೂಪವಾಗಿದ್ದು, ಅದೃಶ್ಯ ದೇವರ ಸದೃಶ್ಯ ರೂಪ ಮನುಷ್ಯನಾಗಿದ್ದಾನೆ. ಜಾತಿ, ಮತ, ಪಂಥ ಭೇದ-ಭಾವಗಳಿಲ್ಲದೆ ಜೀವನ ನಡೆಸುವುದು ಇಂದಿನ ಅಗತ್ಯವಾಗಿದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮಾನವರೂ ಶಾಂತಿ ಸಂದೇಶಕ್ಕೆ ಒತ್ತು ನೀಡಬೇಕು. ಧರ್ಮ ನಡುವೆ, ಜಾತಿಗಳ ನಡುವೆ ದ್ವೇಷ, ಅಸೂಯೆಗಳು ಬೆಳೆಯುತ್ತಿದ್ದು, ಇವುಗಳನ್ನು ಹೋಗಲಾಡಿಸಬೇಕು’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.