ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಮೇ 2023, 15:43 IST
Last Updated 23 ಮೇ 2023, 15:43 IST
ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕಾರ್ಯಾಗಾರವನ್ನು ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್‌ನ ಸುರೇಶ ನಾಯಕ ಉದ್ಘಾಟಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕಾರ್ಯಾಗಾರವನ್ನು ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್‌ನ ಸುರೇಶ ನಾಯಕ ಉದ್ಘಾಟಿಸಿದರು.   

ಭಟ್ಕಳ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣ ಪರಿಶ್ರಮದಿಂದ ಅತೀ ಹೆಚ್ಚು ಓದುವವರಿಗಿಂತ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ಸ್ಮಾರ್ಟ್ ಆಗಿ ಓದಿದವರು ಬೇಗ ಯಶಸ್ಸು ಪಡೆಯುತ್ತಾರೆ ಎಂದು ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್‌ನ ಸುರೇಶ ನಾಯಕ ಹೇಳಿದರು. ಅವರು ಇತ್ತೀಚಿಗೆ ಪಟ್ಟಣದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ಟೆಟ್, ಸಿಟೆಟ್, ಎಫ್.ಡಿ.ಎ.,ಎಸ್.ಡಿ.ಎ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕಾರ್ಯಾಗಾರದಲ್ಲಿ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದರು. ಪರೀಕ್ಷಾ ಸಿದ್ಧತೆ, ವಿಷಯ ವಸ್ತು, ಓದುವ ರೀತಿ, ನೆನಪಿಟ್ಟುಕೊಳ್ಳುವ ವಿಧಾನ ಮುಂತಾದ ಅಂಶಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ , ಮಹಾವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಸುಬ್ರಮಣ್ಯ, ಉಪನ್ಯಾಸಕರಾದ ನಾಗರಾಜ ಮಡಿವಾಳ್, ಸುಧಾ ಹೆಚ್.ಜೆ.ಮತ್ತು ರಶ್ಮಿ ಆರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.