ಕಾರವಾರ: ನಗರದಲ್ಲಿ ತಡರಾತ್ರಿಯಿಂದ ಬಿಡುವು ನೀಡಿದ್ದ ಮಳೆಯು, ಬುಧವಾರ ಬೆಳಿಗ್ಗೆ 9ರಿಂದ ಧಾರಾಕಾರವಾಗಿ ಸುರಿಯುತ್ತಿದೆ. ಚರಂಡಿಗಳಲ್ಲಿ ಭರ್ತಿಯಾಗಿ ಹರಿದು, ಕೆಎಚ್ ಬಿ ಕಾಲೊನಿ, ಹಬ್ಬುವಾಡಾ, ಸಂಕ್ರಿವಾಡಾ ಮುಂತಾದೆಡೆ ರಸ್ತೆಯಲ್ಲಿ ನೀರು ತುಂಬಿದೆ.
ನಗರದ ಕಾಳಿ ನದಿ ಸೇತುವೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲೇ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ದಟ್ಟವಾಗಿ ಕಾರ್ಮೋಡ ಕವಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.