ADVERTISEMENT

ಶಿರಸಿ | ಟಿಆರ್‍ಸಿಗೆ ₹1.27 ಕೋಟಿ ಲಾಭ

2024–25ನೇ ಸಾಲಿನಲ್ಲಿ ಸಂಘದಿಂದ ₹ 122 ಕೋಟಿ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 2:57 IST
Last Updated 13 ಸೆಪ್ಟೆಂಬರ್ 2025, 2:57 IST
ರಾಮಕೃಷ್ಣ ಹೆಗಡೆ ಕಡವೆ 
ರಾಮಕೃಷ್ಣ ಹೆಗಡೆ ಕಡವೆ    

ಶಿರಸಿ: ಇಲ್ಲಿನ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ (ಟಿಆರ್‍ಸಿ)ಯು 2024-25ನೇ ಸಾಲಿನಲ್ಲಿ ₹1.27 ಕೋಟಿ ಲಾಭಗಳಿಸುವುದರೊಂದಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ತಿಳಿಸಿದ್ದಾರೆ.

‘ಸರ್ಕಾರದಿಂದ ರೈತರಿಗೆ ಸಿಗುವ ಬಡ್ಡಿ ರಿಯಾಯಿತಿ ಸಾಲಗಳನ್ನು ಸಂಘವು ಸಕಾಲಿಕವಾಗಿ ಒದಗಿಸುತ್ತಾ ಬಂದಿದ್ದು ಕೃಷಿಕರಿಗೆ ₹37 ಕೋಟಿಗೂ ಮೀರಿ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ನೀಡಿದೆ. ವರದಿ ಸಾಲಿನಲ್ಲಿ ಸಂಘದ ಸದಸ್ಯರಿಗೆ ₹5.85 ಕೋಟಿಗೂ ಅಧಿಕ ಮೊತ್ತದ ಬೆಳೆ ವಿಮಾ ಪರಿಹಾರ ದೊರಕಿಸಲಾಗಿದೆ. ಅಲ್ಲದೆ ಟಿಆರ್‍ಸಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಸಾಧನಾ ಪ್ರಶಸ್ತಿ ಸಂಘಕ್ಕೆ ಲಭಿಸಿದೆ’ ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದ್ದಾರೆ.

‘ಕಳೆದ ಮಾರ್ಚ್ ಅಂತ್ಯಕ್ಕೆ ಇದ್ದಂತೆ ಸಂಘದ ದುಡಿಯುವ ಬಂಡವಾಳ ₹152 ಕೋಟಿ ಇದೆ. ಸದಸ್ಯರಿಗೆ ವಿತರಿಸಿದ ಸಾಲ ₹122 ಕೋಟಿ ಆಗಿದೆ. ಸಾಲ ವಸೂಲಿ ಪ್ರಮಾಣ ಶೇ.99.83ರಷ್ಟಿದ್ದು, 2024-25ನೇ ಸಾಲಿನಲ್ಲಿ 21,400 ಕ್ವಿಂಟಲ್ ಮಹಸೂಲು ಸಂಘದ ಮೂಲಕ ಮಾರಲಾಗಿದೆ. ಇದರ ಮೊತ್ತ ₹59 ಕೋಟಿಗೂ ಅಧಿಕವಾಗಿದೆ. ಮಾರ್ಚ್ ಅಂತ್ಯಕ್ಕೆ ಸದಸ್ಯರ ಶೇರು ₹11ಕೋಟಿ ಇದ್ದು, ಇದು ಕಳೆದ ಸಾಲಿಗಿಂತ ಶೇ.10.31ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಸದಸ್ಯರ ಠೇವು ₹76 ಕೋಟಿ, ನಿಧಿಗಳು ₹15 ಕೋಟಿ, ಸಂಘದ ಸಾಲ ₹27 ಕೋಟಿ ಇದ್ದು, ಎಲ್ಲ ವಿಭಾಗಳಲ್ಲಿ ಪ್ರಗತಿ ದಾಖಲಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಘದ ಸದಸ್ಯರಿಗೆ ಬೆಳೆಸಾಲದ ಜತೆಗೆ ಹೈನುಗಾರಿಕೆ ಕೋಳಿ ಸಾಕಾಣಿಕೆಗೆ ಕೆಸಿಸಿ ಸಾಲ ನೀಡುತ್ತಿದ್ದು ಪ್ರಸಕ್ತ ವರ್ಷದಿಂದ ಶೂನ್ಯ ಬಡ್ಡಿದರದಲ್ಲಿ ಜೇನು ಸಾಕಾಣಿಕೆಗೆ ಸಾಲ ನೀಡಲು ಪ್ರಾರಂಭಿಸಲಾಗಿದೆ.

-ರಾಮಕೃಷ್ಣ ಹೆಗಡೆ ಕಡವೆ ಟಿಆರ್‍ಸಿ ಅಧ್ಯಕ್ಷ

ಸೆ.18 ರಂದು ವಾರ್ಷಿಕ ಸಭೆ: ಟಿಆರ್‍ಸಿಯ 112ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆ.18 ರಂದು ಬೆಳಿಗ್ಗೆ 10 ಗಂಟೆಗೆ ಟಿಆರ್‍ಸಿ ಸಭಾಭವನದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.