
ಶಿರಸಿ: 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಟಿಎಸ್‍ಎಸ್ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ತಾಲ್ಲೂಕಿನ ಮತ್ತಿಘಟ್ಟದ ಮುಂಡಗನಮನೆ ಸಹಕಾರ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ನಡೆಸಿದ ರಕ್ತದಾನ ಕಾರ್ಯಕ್ರಮದಲ್ಲಿ 13 ಸಾರ್ವಜನಿಕರು ಟಿಎಸ್‍ಎಸ್ ಆಸ್ಪತ್ರೆಯ ರಕ್ತನಿಧಿಗೆ ರಕ್ತದಾನ ಮಾಡಿದರು. ಇದರೊಂದಿಗೆ ರಕ್ತವರ್ಗೀಕರಣ ಮತ್ತು ಮಧುಮೇಹ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಯಿತು. ಟಿಎಸ್‍ಎಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಸ್ವಾತಿ ವಿನಾಯಕ, ಡಾ.ಅರುಣ ಶೆಟ್ಟಿ, ಡಾ.ವಿಜಯಕುಮಾರ, ಡಾ.ವೀರೇಶ ಎಸ್.ಬಿ, ಡಾ.ಆರ್.ತೇಜಸ್ವಿನಿ ಕಾರ್ತಿಕ ಹಾಗೂ ಆಸ್ಪತ್ರೆಯ ಆಯ್ದ ಸಿಬ್ಬಂದಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಆರೋಗ್ಯ ಸಂಬಂಧಿ ಚಿಕಿತ್ಸೆ ಪಡೆದರು. ಅಗತ್ಯವಿರುವವರಿಗೆ ಶಿಬಿರದಲ್ಲಿ ಇಸಿಜಿ ಪರೀಕ್ಷೆಯನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಟಿಎಸ್ಎಸ್ ಆಸ್ಪತ್ರೆಯ ಅಭಿವೃದ್ಧಿಗೆ ಸಂಘದ ಸದಸ್ಯರ ಹಾಗೂ ನೌಕರರ ಪರವಾಗಿ ₹4 ಲಕ್ಷ ದೇಣಿಗೆಯ ಚೆಕ್‍ನ್ನು ಸಂಘದ ನಿರ್ದೇಶಕರು ಟಿಎಸ್‍ಎಸ್ ಆಸ್ಪತ್ರೆ ಆಡಳಿತ ಸಮಿತಿಗೆ ಹಸ್ತಾಂತರಿಸಿದರು. ಟಿಎಸ್‍ಎಸ್ ಆಸ್ಪತ್ರೆಯ ರಕ್ತ ನಿಧಿಗೆ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಮಹೇಶ ಭಟ್, ಮಾಲತೇಶ ಮಡಿವಾಳ, ಸೈಯೀದ್ ಇಬ್ರಾಹಿಂ ಶೇಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಟಿಎಸ್ಎಸ್ ಆಸ್ಪತ್ರೆ ಖಜಾಂಚಿ ಎಂ.ಪಿ. ಹೆಗಡೆ ಬೊಪ್ಪನಳ್ಳಿ ಉದ್ಘಾಟಿಸಿದರು. ಆಸ್ಪತ್ರೆ ಉಪಾಧ್ಯಕ್ಷ ಎಂ.ವಿ. ಜೋಷಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಶಿರಸಿ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣೇಶ ಹೆಗಡೆ ಇದ್ದರು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ ನಿರ್ವಹಿಸಿದರು. ಸಂಘದ ಸಿಬ್ಬಂದಿ ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಮಾಜಿ ಮುಖ್ಯಕಾರ್ಯನಿವಾಹಕ ವಿ.ಆರ್.ಹೆಗಡೆ ಸ್ವಾಗತಿಸಿದರು. ಸಂಘದ ಸಹಕಾರ್ಯನಿರ್ವಾಹಕ ದತ್ತಾತ್ರಯ ಭಟ್ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.