ADVERTISEMENT

ಪತ್ರಕ್ಕೆ ಸ್ಪಂದನೆ ಇಲ್ಲ: ದೇಶಪಾಂಡೆ ಬೇಸರ

​ಪ್ರಜಾವಾಣಿ ವಾರ್ತೆ
Published 28 ಮೇ 2021, 21:43 IST
Last Updated 28 ಮೇ 2021, 21:43 IST

ಶಿರಸಿ: ‘ಕೋವಿಡ್ ಪರಿಸ್ಥಿತಿ ನಿಯಂತ್ರಣ ಸಲುವಾಗಿ ಸಲಹೆ, ಸಮಸ್ಯೆ ತಿಳಿಸಲು ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಸಚಿವರಿಗೆ 25ಕ್ಕೂ ಹೆಚ್ಚು ಬರೆದಿದ್ದೇನೆ. ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ. ಸಚಿವರು ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಶಿರಸಿಗೆ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜನರಿಂದ ದೂರ ಉಳಿದಿರುವ ಸರ್ಕಾರ ಜೀವಂತ ಇದೆಯೆ’ ಎಂದು ಪ್ರಶ್ನಿಸಿದರು.

‘ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾದ ತಕ್ಷಣವೇ ಕೋವಿಡ್ ನಿಯಂತ್ರಣಕ್ಕೆ ಸರ್ವ ಪಕ್ಷ ಪ್ರಮುಖರ ಸಮಿತಿ ರಚಿಸಿದರು. ರಾಜ್ಯದಲ್ಲಿ ಅಂತಹ ಮಾದರಿ ಅನುಸರಿಸಬಹುದಿತ್ತು’ ಎಂದು ಹೇಳಿದರು.

ADVERTISEMENT

‘ಕೃಷಿ, ತೋಟಗಾರಿಕಾ ಬೆಳೆಗಳಿಗೆ ಸರ್ಕಾರ ಈಗ ಘೋಷಿಸಿರುವ ಪರಿಹಾರ ಅತಿ ಕನಿಷ್ಟವಾಗಿದೆ. ಆದೇಶದ ಪುನರ್ ಪರಿಶೀಲನೆ ಮಾಡಲಿ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.