ಭಟ್ಕಳ: ಅನಾರೋಗ್ಯದಿಂದ ಮೃತಪಟ್ಟ ಭಿಕ್ಷುಕಿಯೊಬ್ಬರ ಮೃತ ದೇಹಕ್ಕೆ ಭಟ್ಕಳದ ಸಮಾಜ ಸೇವಕ ಮಂಜು ಮುಟ್ಟಳ್ಳಿ ಪಟ್ಟಣದ ಬಂದರು ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಹಾವೇರಿ ಜಿಲ್ಲೆಯ ಜುಮ್ಮನವರ ನಿವಾಸಿ ಮಾದೇವಮ್ಮ ಶಂಕರನಾಗ ಮೃತರು. ಇವರು ಮುರುಡೇಶ್ವರದ ಸುತ್ತಲು ಭಿಕ್ಷಾಟನೆ ಮಾಡಿಕೊಂಡು ಮುರುಡೇಶ್ವದ ನಾಕಾದಲ್ಲಿರುವ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದರು. 3-4 ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಭಟ್ಕಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
8 ತಿಂಗಳ ಹಿಂದಷ್ಟೇ ಈಕೆಯ ಮಗ ಕೂಡ ಅತಿಯಾದ ಮದ್ಯ ಸೇವನೆಯಿಂದ ಮುರುಡೇಶ್ವರದಲ್ಲಿ ಮೃತಪಟ್ಟಿದ್ದು ಆತನ ಮೃತ ದೇಹವನ್ನು ಕೂಡ ಮಂಜು ಅವರೇ ಮಾದೇವಮ್ಮ ಜೊತೆಗೂಡಿ ಅಂತ್ಯಕ್ರಿಯೆ ಮಾಡಿದ್ದರು. ಇವರಿಗೆ ಸ್ಥಳೀಯರಾದ ಪದ್ಮಯ ದೇವಾಡಿಗ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ಎವರೆಸ್ಟ್ ಲೋಬೋ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.