ADVERTISEMENT

ನಾಡವರ ಯೂತ್ ಕ್ರಿಕೆಟ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:04 IST
Last Updated 11 ಏಪ್ರಿಲ್ 2025, 16:04 IST
ಅಂಕೋಲಾದ ನಡುಬೇಣದಲ್ಲಿ ನಡೆದ ನಾಡವರ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಯಮಿ ರಾಘವೇಂದ್ರ ನಾಯಕ ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹಾಜರಿದ್ದರು
ಅಂಕೋಲಾದ ನಡುಬೇಣದಲ್ಲಿ ನಡೆದ ನಾಡವರ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಯಮಿ ರಾಘವೇಂದ್ರ ನಾಯಕ ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹಾಜರಿದ್ದರು   

ಪ್ರಜಾವಾಣಿ ವಾರ್ತೆ

ಅಂಕೋಲಾ: ‘ನಾಡವರ ಯೂತ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಮಾದರಿಯಾಗಿದೆ. ಇಂತಹ ಕ್ರೀಡೆಗಳಿಗೆ ಸಂಘಟನೆಗಳು ಅತ್ಯಂತ ಅಗತ್ಯ’ ಎಂದು ಉದ್ಯಮಿ ರಾಘವೇಂದ್ರ ನಾಯಕ ದೇವರಬಾವಿ ಹೇಳಿದರು.

ಬಾಸಗೋಡದ ನಡುಬೇಣದಲ್ಲಿ ನಾಡವರ ಸಮಾಜದ ಯುವಕರ ಸಂಘ ಹಮ್ಮಿಕೊಂಡ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ, ‘ಶಿಕ್ಷಣದ ಜೊತೆಯಲ್ಲಿ ಕ್ರೀಡೆ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಅಗತ್ಯ. ಇಂತಹ ಕ್ರೀಡೆಗಳು ಸಂಘಟನೆಗೆ ಸಹ ದಾರಿಯಾಗುತ್ತದೆ’ ಎಂದರು.

ವಕೀಲ ಪ್ರದೀಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗೋಕುಲ್ ನಾಯಕ, ಸನತ್ ನಾಯಕ, ಅಕ್ಷಯ್ ಗಾಂವಕರ, ಇತರರು ಇದ್ದರು. ರಜತ್ ನಾಯಕ ಸ್ವಾಗತಿಸಿದರು, ಪತ್ರಕರ್ತ ಸುಭಾಷ್ ಕಾರೆಬೈಲ್ ನಿರ್ವಹಿಸಿದರು. ಭುವನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.