ADVERTISEMENT

ಕಾಳಿ ನದಿ: ರಕ್ಷಣೆಗೆ ಹಾಕಿದ್ದ ತಂತಿಬೇಲಿ ದಾಟಿ ಬಂದ ಮೊಸಳೆ!

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 8:19 IST
Last Updated 26 ಅಕ್ಟೋಬರ್ 2025, 8:19 IST
Shwetha Kumari
   Shwetha Kumari

ಕಾರವಾರ: ಹಳೆ ದಾಂಡೇಲಿಯ ಕಾಳಿ ನದಿ ಅಂಚಿನಲ್ಲಿ ರಕ್ಷಣೆಗೆ ಹಾಕಿದ್ದ ತಂತಿ ಬೇಲಿಯನ್ನು ದಾಟಿ ಮೊಸಳೆಯೊಂದು ದಡಕ್ಕೆ ಬಂದಿದೆ.

ದೊಡ್ಡ ಗಾತ್ರದ ಮೊಸಳೆ ಬೇಲಿ ದಾಟಿಕೊಂಡು ಬಂದು, ಪುನಃ ನದಿಗೆ ಸೇರಲು ಪರದಾಡಿದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ನದಿಯ ಅಂಚಿನ ಬಟ್ಟೆ ತೊಳೆಯುವ ಸ್ಥಳಕ್ಕೆ ಮೊಸಳೆ ಬಂದು ಕುಳಿತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ಸೆರೆಹಿಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.