ADVERTISEMENT

ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಯುವಕ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 5:56 IST
Last Updated 29 ಜನವರಿ 2020, 5:56 IST
ನಾಯಿಮರಿಗೆ ಮದ್ಯ ಕುಡಿಸಿದ ಯುವಕ
ನಾಯಿಮರಿಗೆ ಮದ್ಯ ಕುಡಿಸಿದ ಯುವಕ   

ಕಾರವಾರ:ಕುಮಟಾದ ಕಡ್ಲೆ ಗಾಂಧಿವನ ಕ್ರೀಡಾಂಗಣದಲ್ಲಿ ಯುವಕನೊಬ್ಬ ಬೀದಿ ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದಾನೆ. ಗಾಳಿ ಮರದ ಕೆಳಗೆ, ಹಾಡಹಗಲೇ ಮದ್ಯದ ಬಾಟಲಿ ತೆರೆದ ಆತ, ನಾಯಿ ಮರಿಯನ್ನು ಹಿಡಿದು ಅದರ ಬಾಯಿಗೆ ಮದ್ಯ ಸುರಿದಿದ್ದಾನೆ.

ಸಮೀಪದಲ್ಲಿದ್ದ ಮತ್ತೊಬ್ಬ ಅದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ತುಣುಕುಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆತ ಯಾರು, ಎಲ್ಲಿಯವನು, ಯಾವಾಗ ಈ ರೀತಿ ಮಾಡಿದ್ದು ಎಂದು ಗೊತ್ತಾಗಿಲ್ಲ. ನಾಯಿ ಮರಿಯನ್ನು ಹಿಡಿದ ಆತ, ‘ನೀನು ಕೂತ್ಕೊಳ್ಳೆ, ಲಾಸ್ಟ್ ಪೆಗ್ ಐತಷ್ಟೇ...’ಎನ್ನುತ್ತಾ ಮದ್ಯ ಕುಡಿಸಿದ್ದಾನೆ. ನಂತರ ಅದು ಕಷ್ಟಪಡುತ್ತಾ ಹೋಗಿ ಮರದ ಕೆಳಗೆ ಮಲಗಿದ್ದನ್ನು ಕಂಡು ಸಂಭ್ರಮಿಸಿದ್ದಾನೆ.

ADVERTISEMENT

ವಿಡಿಯೊ ನೋಡಿದ ಹಲವರು ಈ ಅಮಾನವೀಯ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.