ಸಿದ್ದಾಪುರ: ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಗುರುವಾರ ನಡೆಯಿತು.
ಮೊದಲ ದಿನ ಸಂಸ್ಕೃತಿ ಸಂಪದ ಮತ್ತು ದಿ. ಭಾಸ್ಕರ ಹೆಗಡೆ ಕಲಾವೇದಿಕೆ ಕಲ್ಲಗದ್ದೆ ಸಹಯೋಗದಲ್ಲಿ ನಾದಸಂಧ್ಯಾ ಶೀರ್ಷಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯ ಟಿ.ಜಿ. ಹೆಗಡೆ ಉದ್ಘಾಟಿಸಿದರು. ಧರ್ಮಾಧಿಕಾರಿಗಳಾದ ವಿಜಯ ಹೆಗಡೆ ದೊಡ್ಮನೆ ವೇದಿಕೆಯಲ್ಲಿದ್ದರು.
ಕಲಾವೇದಿಕೆಯ ಅಧ್ಯಕ್ಷ ನವೀನ ಹೆಗಡೆ ಸ್ವಾಗತಿಸಿದರು. ಸಂಚಾಲಕ ನಿತಿನ್ ಹೆಗಡೆ ಕಲಗದ್ದೆ ಸಹಕರಿಸಿದರು. ಶಿಕ್ಷಕ ವೀರಭದ್ರ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸತೀಶ ಹೆಗಡೆ ಯಾಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ತಬಲಾದಲ್ಲಿ ಮಹೇಶ ಹೆಗಡೆ ಹೊಸಗದ್ದೆ, ಹಾರ್ಮೋನಿಯಂನಲ್ಲಿ ರಾಜೇಂದ್ರ ಕೊಳಗಿ, ತಾನ್ಪುರದಲ್ಲಿ ನವೀನ ಹೆಗಡೆ ಶಿರಸಿ ಸಹಕರಿಸಿದರು.
ನಂತರ ಯುವ ಗಾಯಕ ಮನು ಹೆಗಡೆ ಪುಟ್ಟನಮನೆ ರಾಗ ಜೈಜೈವಂತಿ ಪ್ರಸ್ತುತಪಡಿಸಿದರು. ಡಾ. ಸಮೀರ ಬಾದ್ರಿ ಹಾರ್ಮೋನಿಯಂನಲ್ಲಿ, ಸಂದೇಶ ಹೆಗಡೆ ತಬಲಾದಲ್ಲಿ ಹಾಗೂ ನವೀನ ಹೆಗಡೆ ತಾನ್ಪುರದಲ್ಲಿ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.