ADVERTISEMENT

ಮುಂಡಗೋಡ: ದಲಾಯಿ ಲಾಮಾ ಸ್ವಾಗತಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 2:44 IST
Last Updated 17 ನವೆಂಬರ್ 2025, 2:44 IST
ಮುಂಡಗೋಡ ತಾಲ್ಲೂಕಿನ ಟಿಬೆಟ್‌ನಲ್ಲಿ ಬೌದ್ಧ ಮಂದಿರದ ಕಾಂಪೌಂಡ್ ಗೋಡೆಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕ
ಮುಂಡಗೋಡ ತಾಲ್ಲೂಕಿನ ಟಿಬೆಟ್‌ನಲ್ಲಿ ಬೌದ್ಧ ಮಂದಿರದ ಕಾಂಪೌಂಡ್ ಗೋಡೆಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕ   

ಮುಂಡಗೋಡ: ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಡಿ.12ರಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಆಗಮಿಸುವ ನಿಮಿತ್ತ ಬೌದ್ಧ ಗುರುವಿನ ಸ್ವಾಗತಕ್ಕೆ ಕ್ಯಾಂಪ್‌ನಲ್ಲಿ ಭರದ ಸಿದ್ಧತೆ ನಡೆದಿದೆ.

ಇಲ್ಲಿಯ ಟಿಬೆಟಿಯನ್ ಕ್ಯಾಂಪ್‌ನಲ್ಲಿ ದಲೈ ಲಾಮಾ ಅವರು ಒಂದೂವರೆ ತಿಂಗಳು ವಾಸ್ತವ್ಯ ಹೂಡಲಿದ್ದು, ಕ್ಯಾಂಪ್ ನಂ.6ರ ಕಾಂಪೌಂಡ್ ಗೋಡೆಗೆ ಬಣ್ಣ, ಉದ್ಯಾನಕ್ಕೆ ಹೊಸ ರೂಪ, ಕಾರಂಜಿ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಗಳಿಂದ ‘ಮಿನಿ ಟಿಬೇಟ್’ ಸಿದ್ಧಗೊಳ್ಳುತ್ತಿದೆ.

ಅರುಣಾಚಲ, ಹಿಮಾಚಲ, ಲಡಾಖ್ ಭಾಗದ ಬೌದ್ಧ ಅನುಯಾಯಿಗಳು ಈಗಾಗಲೇ ಕ್ಯಾಂಪ್‌ಗೆ ಆಗಮಿಸುತ್ತಿದ್ದು, ವಲಸೆ ಹೋದ ಸ್ಥಳೀಯ ಟಿಬೆಟಿಯನ್‌ರು ಮರಳಿ ಬರುತ್ತಿದ್ದಾರೆ. 

ADVERTISEMENT

ಕೂಲಿ ಕಾರ್ಮಿಕರಿಗೆ ಕೈ ತುಂಬ ಕೆಲಸ: ‘ಟಿಬೆಟಿಯನ್ ಕ್ಯಾಂಪ್‌ನಲ್ಲಿ ಪೇಂಟರ್, ಕಾರ್ಪೆಂಟರಿ, ಕಟ್ಟಡ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, ನಿಗದಿತ ಅವಧಿಯೊಳಗೆ ಕೆಲಸ ಮುಗಿಸಲು ಹಗಲು ರಾತ್ರಿ ಕೆಲಸ ಮಾಡುವ ಅನಿವಾರ್ಯತೆಯಿದೆ’ ಎಂದು ಕಾರ್ಮಿಕ ಪೂರೈಕೆದಾರ ಮಂಜುನಾಥ ಹೇಳಿದರು.

‘ಬೌದ್ಧ ಮಂದಿರಗಳು ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ. ಕಾಲೊನಿ ವಿವಿಧೆಡೆ ಸ್ವಾಗತ ಕಮಾನು ಅಳವಡಿಸಲಾಗುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳ ಕುರಿತು ಅಧಿಕೃತ ಸೂಚನೆ ಇದುವರೆಗೂ ಬಂದಿಲ್ಲ’ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.