ADVERTISEMENT

ದಾಂಡೇಲಿ | ಸಾಲ ತೀರಿಸಲು ಶಿಶು ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 19:07 IST
Last Updated 11 ಜುಲೈ 2025, 19:07 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ದಾಂಡೇಲಿ (ಉತ್ತರ ಕನ್ನಡ): ಸಾಲ ತೀರಿಸಲು 20 ದಿನದ ಶಿಶು ಮಾರಿದ್ದ ಪ್ರಕರಣದಲ್ಲಿ ದಾಂಡೇಲಿ ಪೋಲಿಸರು, ಇಬ್ಬರನ್ನು ಶುಕ್ರವಾರ ಬಂಧಿಸಿದ್ದಾರೆ.

ADVERTISEMENT

‘ಬೆಳಗಾವಿ ಜಿಲ್ಲೆ ಆನಗೋಲದ ನೂರ ಅಹ್ಮದ್ ಮಜಿದ್ ನಾಯಕ ಮತ್ತು ಕಿಶನ್ ಐರೇಕರ ಬಂಧಿತರು. ಅವರಿಗೆ ಹಳೇದಾಂಡೇಲಿಯ ದೇಶಪಾಂಡೆನಗರದ ನಿವಾಸಿ ಮಾಹಿನ್, ಆಕೆಯ ಪತಿ ವಾಸೀಮ್ ಚಂದು ಪಟೇಲ ₹3 ಲಕ್ಷಕ್ಕೆ ಶಿಶು ಮಾರಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಖಾಸಗಿ ಫೈನಾನ್ಸ್‌ನಲ್ಲಿ ಮಾಡಿದ್ದ ಸಾಲ ತೀರಿಸಲು ದಂಪತಿಗೆ ಹಣದ ಅಗತ್ಯವಿತ್ತು. ಹೀಗಾಗಿ ಮಾಹಿನ್ ಜನ್ಮ ನೀಡಿದ್ದ ಮಗುವನ್ನು ಜುಲೈ 8 ರಂದು ಧಾರವಾಡದಲ್ಲಿ ಶಿಶು ಮಾರಿದ್ದರು. ದಂಪತಿ ಪತ್ತೆಗೆ ಪ್ರಯತ್ನ ನಡೆದಿದೆ’ ಎಂದು  ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.