
ಪ್ರಜಾವಾಣಿ ವಾರ್ತೆ
ದಾಂಡೇಲಿ ಕುಳಗಿ ರಸ್ತೆಯ ಈಶ್ವರ ದೇವಾಲಯದಲ್ಲಿ ಭಾನುವಾರ ಸಂಜೆ ಶಿವನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದಾಂಡೇಲಿ: ನಗರ ಹಾಗೂ ತಾಲ್ಲೂಕಿನಾದ್ಯಂತ ವಿವಿಧ ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯನ್ನು ಶ್ರದ್ಧೆ ಭಕ್ತಿಯಿಂದ ಭಾನುವಾರ ಆಚರಿಸಲಾಯಿತು
ನಗರದ ಕುಳಗಿ ರಸ್ತೆಯ ದೇವಸ್ಥಾನ, ಹಳೇ ದಾಂಡೇಲಿ ಶಿವ ದೇವಸ್ಥಾನ, ಗಣೇಶ ನಗರದ ಹಾಲೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಕುಳಗಿ ರಸ್ತೆಯಲ್ಲಿ ಇರುವ ಶಿವನ ದೇವಸ್ಥಾನದಲ್ಲಿ ಭಕ್ತರ ದಂಡು ನೆರೆದಿತ್ತು. ಕಾಳಿ ನದಿಯ ನೀರಿನಿಂದ ಜಲಾಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ, ಕ್ಷೀರಾಭಿಷೇಕ ನಡೆಯಿತು. ಬೈಲಪಾರದ ಜಂಗಲೇಶ್ವರ, ಹಳೆ ದಾಂಡೇಲಿಯ ಶಿವನ ಮಂದಿರ ಸೇರಿದಂತೆ ನಗರದ ಅನೇಕ ಕಡೆ ವಿಶೇಷ ಪೂಜೆ ನಡೆದವು. ದೇವಸ್ಥಾನಕ್ಕೆ
ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.