ADVERTISEMENT

ದಸರಾ ರಜೆ:‘ಟುಪಲೇವ್’ ವೀಕ್ಷಣೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:34 IST
Last Updated 5 ಅಕ್ಟೋಬರ್ 2025, 7:34 IST
ಕಾರವಾರದಲ್ಲಿರುವ ಟುಪಲೇವ್ ಯುದ್ಧವಿಮಾನ ವಸ್ತುಸಂಗ್ರಹಾಲಯ ವೀಕ್ಷಿಸಲು ಕಾದಿದ್ದ ಪ್ರವಾಸಿಗರು.
ಕಾರವಾರದಲ್ಲಿರುವ ಟುಪಲೇವ್ ಯುದ್ಧವಿಮಾನ ವಸ್ತುಸಂಗ್ರಹಾಲಯ ವೀಕ್ಷಿಸಲು ಕಾದಿದ್ದ ಪ್ರವಾಸಿಗರು.   

ಕಾರವಾರ: ದಸರಾ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿ ಭಾಗದತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುವ ‘ಟುಪಲೇವ್’ ಯುದ್ಧವಿಮಾನ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಜನರು ಮುಗಿಬಿದ್ದಿದ್ದಾರೆ.

ಕಳೆದ ಒಂದು ವಾರದಿಂದ ಈಚೆಗೆ ಯುದ್ಧವಿಮಾನ ವಸ್ತು ಸಂಗ್ರಹಾಲಯವನ್ನು ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಜನರು ಕಣ್ತುಂಬಿಕೊಂಡಿದ್ದಾರೆ. ದೂರದ ಊರುಗಳಿಂದ ಕಾರವಾರ ಮಾರ್ಗವಾಗಿ ಗೋವಾದತ್ತ ಸಾಗುತ್ತಿದ್ದ ಪ್ರವಾಸಿಗರು ಯುದ್ಧವಿಮಾನ ಕಂಡು ಇಲ್ಲಿ ಕೆಲ ಕಾಲ ನೆಲೆನಿಂತು ಇಲ್ಲಿ ಸ್ಥಳ ವೀಕ್ಷಿಸತೊಡಗಿದ್ದಾರೆ.

ವರ್ಷದಿಂದ ನೆಲೆನಿಂತರೂ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ ಆ.15 ರಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಂಡಿತ್ತು. ದಸರಾ ರಜೆ ಆರಂಭಗೊಂಡ ಬಳಿಕ ವೀಕ್ಷಣೆಗೆ ಬರುತ್ತಿರುವವರ ಸಂಖ್ಯೆ ಏರಿಕೆಯಾಗಿದೆ.

ADVERTISEMENT

‘ಒಂದೂವರೆ ತಿಂಗಳ ಅವಧಿಯಲ್ಲಿ ಟಿಕೆಟ್ ಮಾರಾಟದಿಂದ ₹2.83 ಲಕ್ಷ ಸಂಗ್ರಹವಾಗಿದೆ. ಸುಮಾರು 6 ಸಾವಿರದಷ್ಟು ಜನರು ಯುದ್ಧವಿಮಾನವನ್ನು ವೀಕ್ಷಣೆ ಮಾಡಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಗೋವಾಕ್ಕೆ ತೆರಳಲು ಕಾರವಾರದ ಹೆದ್ದಾರಿ ಮೇಲ್ಸೇತುವೆ ಮೂಲಕ ಸಾಗುವಾಗ ಯುದ್ಧವಿಮಾನ ಕಾಣಿಸಿತು. ಇದನ್ನು ಕಣ್ತುಂಬಿಕೊಳ್ಳಲು ವಸ್ತುಸಂಗ್ರಹಾಲಯವಿದ್ದ ಜಾಗಕ್ಕೆ ಬಂದೆವು. ಆ ಬಳಿಕ ಇಲ್ಲಿನ ಯುದ್ಧ ನೌಕೆ, ಕಡಲತೀರ ವೀಕ್ಷಿಸಿದೆವು. ಯುದ್ಧವಿಮಾನ ಹೇಗಿರುತ್ತದೆ ಎಂಬುದನ್ನು ಅರಿಯಲು ಟುಪಲೇವ್ ನೆರವಾಯಿತು’ ಎಂದು ಹಾಸನದ ವಿ.ತೇಜಶ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.