ADVERTISEMENT

‘ಐ.ಎನ್.ಎಸ್ ಘರಿಯಲ್’ ಸಿಬ್ಬಂದಿಗೆ ರಾಜನಾಥ ಸಿಂಗ್ ಅಚ್ಚರಿಯ ಕರೆ

​ಪ್ರಜಾವಾಣಿ ವಾರ್ತೆ
Published 27 ಮೇ 2022, 15:07 IST
Last Updated 27 ಮೇ 2022, 15:07 IST
ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ಜಲಾಂತರ್ಗಾಮಿ ನೌಕೆ ‘ಐ.ಎನ್.ಎಸ್ ಖಂಡೇರಿ’ಯಲ್ಲಿ ಸಮುದ್ರಯಾನ ಮಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಸಮುದ್ರದಾಳದಲ್ಲಿ ಕೈಗೊಳ್ಳುವ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆ ವೀಕ್ಷಿಸಿದರು
ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ಜಲಾಂತರ್ಗಾಮಿ ನೌಕೆ ‘ಐ.ಎನ್.ಎಸ್ ಖಂಡೇರಿ’ಯಲ್ಲಿ ಸಮುದ್ರಯಾನ ಮಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಸಮುದ್ರದಾಳದಲ್ಲಿ ಕೈಗೊಳ್ಳುವ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆ ವೀಕ್ಷಿಸಿದರು   

ಕಾರವಾರ: ಇಲ್ಲಿನ ‘ಐ.ಎನ್.ಎಸ್ ಕದಂಬ’ ನೌಕಾನೆಲೆಯಲ್ಲಿ ಶುಕ್ರವಾರ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್, ಶ್ರೀಲಂಕಾದ ಕೊಲಂಬೊದಲ್ಲಿರುವ ‘ಐ.ಎನ್.ಎಸ್ ಘರಿಯಲ್’ ನೌಕೆಯ ಸಿಬ್ಬಂದಿಗೆ ಪೂರ್ವ ಸೂಚನೆ ನೀಡದೇ ವಿಡಿಯೊ ಕರೆ ಮಾಡಿ ಅಚ್ಚರಿಗೊಳಿಸಿದರು.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ, ಭಾರತದಿಂದ ತುರ್ತು ಪರಿಹಾರ ಸಾಮಗ್ರಿಗಳನ್ನು ‘ಘರಿಯಲ್’ ನೌಕೆಯ ಮೂಲಕ ರವಾನಿಸಲಾಗಿದೆ. ನೌಕೆಯ ಸಿಬ್ಬಂದಿ ಜೊತೆ ಮಾತನಾಡಿದ ರಾಜನಾಥ ಸಿಂಗ್, ಪರಿಶ್ರಮವನ್ನು ಶ್ಲಾಘಿಸಿದರು. ‘ನೆರೆಹೊರೆ ಮೊದಲು’ ಎಂಬ ಸರ್ಕಾರದ ನೀತಿ ಮತ್ತು ದೇಶದೊಂದಿಗೆ ಸಮುದ್ರದಲ್ಲಿ ಗಡಿ ಹಂಚಿಕೊಂಡಿರುವ ನೆರೆಯ ದೇಶದೊಂದಿಗೆ ಬಾಂಧವ್ಯ ವೃದ್ಧಿಗೆ ಒತ್ತು ಕೊಟ್ಟರು.

ನೌಕೆಯು ಶ್ರೀಲಂಕಾ ತಲುಪಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ‘ನೆರೆಹೊರೆಯ ಸ್ನೇಹಿತರಿಗೆ (ದೇಶಗಳು) ಅಗತ್ಯವಿದ್ದಾಗ ನೆರವಿಗೆ ಧಾವಿಸುವುದು ಭಾರತದ ಹಳೆಯ ಸಂಪ್ರದಾಯವಾಗಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.