ADVERTISEMENT

ಮಾರುಕಟ್ಟೆಗೆ ಬಂತು ಕಣಲೆ, ಅಮಟೆಕಾಯಿ

ಸ್ಥಳೀಯ ತರಕಾರಿಗೆ ಬೇಡಿಕೆ: ಕಡಿಮೆಯಾದ ಬಯಲುಸೀಮೆ ಕಾಯಿಪಲ್ಲೆ ಆವಕ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:54 IST
Last Updated 1 ಆಗಸ್ಟ್ 2019, 14:54 IST
ಕಾರವಾರದ ಗ್ರಾಮೀಣ ಪೊಲೀಸ್ ಠಾಣೆಯ ಸಮೀಪ ಕಣಲೆ, ಅಮಟೆಕಾಯಿ ಮುಂತಾದ ತರಕಾರಿಗಳನ್ನು ಮಹಿಳೆಯೊಬ್ಬರು ಮಾರಾಟ ಮಾಡುತ್ತಿರುವುದು
ಕಾರವಾರದ ಗ್ರಾಮೀಣ ಪೊಲೀಸ್ ಠಾಣೆಯ ಸಮೀಪ ಕಣಲೆ, ಅಮಟೆಕಾಯಿ ಮುಂತಾದ ತರಕಾರಿಗಳನ್ನು ಮಹಿಳೆಯೊಬ್ಬರು ಮಾರಾಟ ಮಾಡುತ್ತಿರುವುದು   

ಕಾರವಾರ: ನಗರದ ರಸ್ತೆ ಬದಿಯ ತರಕಾರಿ ವ್ಯಾಪಾರಿಗಳಿಗೆ ಈಗ ಸ್ಥಳೀಯ ಕಾಯಿಪಲ್ಲೆಗಳ ವ್ಯಾಪಾರ ಜೋರಾಗಿದೆ.ಅವುಗಳ ಜೊತೆಗೆ ಕಣಲೆ (ಕಳಲೆ), ಬೇರಲಸು, ಅಮಟೆಕಾಯಿ ಮುಂತಾದ ತರಕಾರಿಗಳೂ ಸಿಗುತ್ತಿವೆ. ದೇಸೀ ಶೈಲಿಯ ಪದಾರ್ಥ ಪ್ರಿಯರನ್ನು ಇವು ಕೈಬೀಸಿ ಕರೆಯುತ್ತಿವೆ.

ಮಳೆಗಾಲದಲ್ಲಿ ಮಾತ್ರ ಸಿಗುವ ಬಿದಿರಿನಎಳೆಯ ಗಿಡ ‘ಕಣಲೆ’ಯಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ರುಚಿಕರವಾದ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಎಳೆಯ ಕಾಂಡವನ್ನು ಸಣ್ಣಗೆ ಹೆಚ್ಚಿಮಾಡಿದ ಪಲ್ಯ, ಮಜ್ಜಿಗೆ ಹುಳಿ, ಗಜನಿಂಬೆಯ ಜೊತೆ ಮಿಶ್ರಣ ಮಾಡಿ ತಯಾರಿಸಿದ ಉಪ್ಪಿನಕಾಯಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಹೀಗಾಗಿ ಕಾರವಾರದ ಮಾರುಕಟ್ಟೆಯಲ್ಲೂ ಕಣಲೆ ಜಾಗ ಪಡೆದುಕೊಂಡಿದೆ.

ಇದೇರೀತಿ, ಬೇರಲಸಿನಸಾಂಬಾರು, ಚಿಪ್ಸ್, ಮಜ್ಜಿಗೆ ಹುಳಿ, ಅಮಟೆಕಾಯಿಯ ಗೊಜ್ಜು ಪ್ರಸಿದ್ಧ ತಿನಿಸುಗಳಾಗಿವೆ. ಮಳೆಗಾಲದಲ್ಲೇ ವಿಶೇಷವಾಗಿರುವ ಈ ಹಸಿರು ಪದಾರ್ಥಗಳ ಖರೀದಿಗೂ ಗ್ರಾಹಕರು ಉತ್ಸುಕರಾಗಿದ್ದಾರೆ.ಒಂದು ಕಣಲೆಗೆ ₹ 60, 100 ಅಮಟೆಕಾಯಿಗೆ ₹ 100, ಮೂರು ಬೇರಲಸಿಗೆ ₹ 100ರಂತೆ ಬೀದಿಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಸ್ಥಳೀಯ ತರಕಾರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟರೆ ಘಟ್ಟದ ಮೇಲಿನ ಆವಕವಾಗುವ ಕಾಯಿಪಲ್ಲೆಗೆ ಬೇಡಿಕೆ ಇಳಿಕೆಯಾಗುತ್ತದೆ. ಹಾಗಾಗಿ ಇತರ ತರಕಾರಿಗಳ ದರ ಸದ್ಯಕ್ಕೆಸ್ಥಿರವಾಗಿವೆ.ಪ್ರತಿ ಕೆ.ಜಿ.ಗೆ ₹ 80, ಹಸಿಮೆಣಸಿನಕಾಯಿಗೆ ₹ 70, ಟೊಮೆಟೊ ₹ 40ರಂತೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.