ADVERTISEMENT

ದೇವಿಕೆರೆ ಸ್ವಚ್ಛಗೊಳಿಸಿದ ‘ಡಾಲ್ಫಿನ್’ ತಂಡ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 14:00 IST
Last Updated 9 ನವೆಂಬರ್ 2020, 14:00 IST
ಶಿರಸಿ ನಗರದ ದೇವಿಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಡಾಲ್ಫಿನ್ ಗ್ರುಪ್ ಸದಸ್ಯರು ತೆರವುಗೊಳಿಸಲು ಶ್ರಮದಾನ ನಡೆಸಿದರು
ಶಿರಸಿ ನಗರದ ದೇವಿಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಡಾಲ್ಫಿನ್ ಗ್ರುಪ್ ಸದಸ್ಯರು ತೆರವುಗೊಳಿಸಲು ಶ್ರಮದಾನ ನಡೆಸಿದರು   

ಶಿರಸಿ: ನಗರದ ದೇವಿಕೆರೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಡಾಲ್ಫಿನ್ ಗ್ರುಪ್‍ನ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಕೋಟೆಕೆರೆಯಲ್ಲಿ ಪ್ರತಿವಾರ ಈ ತಂಡ ಸ್ವಚ್ಛತಾ ಕಾರ್ಯ ನಡೆಸುತ್ತಿದೆ. ಈ ವಾರ ದೇವಿಕೆರೆ ಹಾಗೂ ಸುತ್ತಮುತ್ತ ಬೆಳೆದಿದ್ದ ನಿರುಪಯುಕ್ತ ಗಿಡಗಳು, ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿದರು. ಸುಮಾರು ಎರಡು ತಾಸುಗಳ ಕಾಲ ಶ್ರಮದಾನ ನಡೆಸಿದರು.

‘ನಗರದ ಮಧ್ಯದಲ್ಲಿ ಇರುವ ದೇವಿಕೆರೆ ಮಲೀನವಾಗಿರುವುದನ್ನು ಕಂಡು ಬೇಸರವಾಯಿತು. ಕೋಟೆಕೆರೆಯಂತೆ ಈ ಕೆರೆಯನ್ನೂ ಸ್ವಚ್ಛಗೊಳಿಸುವ ಕುರಿತು ಸ್ನೇಹಿತರು ಚರ್ಚಿಸಿದೆವು. ಭಾನುವಾರ ಬಿಡುವು ಮಾಡಿಕೊಂಡು ಸ್ವಚ್ಛತೆ ನಡೆಸಲಾಯಿತು. ಸ್ವಲ್ಪ ದಿನ ಬಿಟ್ಟು ಮತ್ತೆ ಶ್ರಮದಾನ ನಡೆಸಿ, ದೇವಿಕೆರೆ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಡಾಲ್ಫಿನ್ ಗ್ರುಪ್‍ನ ಸದಸ್ಯರಲ್ಲೊಬ್ಬರಾದ ವಿಠ್ಠಲ ಪಂಡಿತ ತಿಳಿಸಿದರು.

ADVERTISEMENT

ಶ್ರಮದಾನದಲ್ಲಿ ಗಣೇಶ ಜೈವಂತ, ದಯಾನಂದ ಅಗಾಸಿ, ಶರತ್ ಪಂಡಿತ, ರೇಮಂಡ್, ಶ್ರೀನಿವಾಸ, ಮಾಲ್ತೇಶ್, ಶಂಕರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.