ADVERTISEMENT

ಶಿರಸಿ | ಡಿಜಿಟಲ್ ಅರೆಸ್ಟ್: ₹89.30 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 17:01 IST
Last Updated 30 ಜುಲೈ 2025, 17:01 IST
<div class="paragraphs"><p> ವಂಚನೆ</p></div>

ವಂಚನೆ

   

ಶಿರಸಿ: ದುಷ್ಕರ್ಮಿಗಳು ಪೊಲೀಸರ ಹೆಸರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಮಾಡಿ, ಶಿರಸಿಯ ರವೀಂದ್ರ ಹೆಗಡೆ ಎಂಬ ಅಡಿಕೆ ವ್ಯಾಪಾರಸ್ಥರನ್ನು ಬೆದರಿಸಿ ₹ 89.30 ಲಕ್ಷ ದೋಚಿದ್ದಾರೆ.

‘ಸಂಜಯ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿ, ಪೊಲೀಸ್ ಎಂದು ಪರಿಚಯಿಸಿಕೊಂಡ. ನಿಮ್ಮ ಹೆಸರಿನ ಬ್ಯಾಂಕ್ ಖಾತೆಯಿದ್ದು, ಕಪ್ಪು ಹಣ ವರ್ಗಾವಣೆಯಾಗಿದೆ. ನಿಮ್ಮನ್ನು ಬಂಧಿಸಲಾಗುವುದು. ಜಾರಿ ನಿರ್ದೇಶನಾಲಯಕ್ಕೂ (ಇ.ಡಿ) ಮಾಹಿತಿ ಕೊಡುವುದಾಗಿ ಬೆದರಿಸಿದರು. ನಂತರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ರವೀಂದ್ರ ಬ್ಯಾಂಕ್‌ ಖಾತೆಗಳಲ್ಲಿದ್ದ ₹ 89.30 ಲಕ್ಷವನ್ನು, ಕರೆ ಮಾಡಿದ ವ್ಯಕ್ತಿ ಹೇಳಿದ ಖಾತೆಗೆ ವರ್ಗಾಯಿಸಿದರು. ತನಿಖೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.