ADVERTISEMENT

ಮಕ್ಕಳಿಗೆ ಸ್ಫೂರ್ತಿ ತುಂಬುವ "ಡೋಂಟ್ ಗಿವ್ ಅಪ್..' ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 16:37 IST
Last Updated 12 ಜುಲೈ 2020, 16:37 IST
ಶಿಕ್ಷಕ ಗಂಗಾಧರ ನಾಯ್ಕ ಬರೆದಿರುವ ‘ಡೋಂಟ್ ಗಿವ್ ಅಪ್...’ ಕೃತಿಯ ಮುಖಪುಟ
ಶಿಕ್ಷಕ ಗಂಗಾಧರ ನಾಯ್ಕ ಬರೆದಿರುವ ‘ಡೋಂಟ್ ಗಿವ್ ಅಪ್...’ ಕೃತಿಯ ಮುಖಪುಟ   

ಮುಂಡಗೋಡ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಗಂಗಾಧರ ನಾಯ್ಕ ಬರೆದ, 'ಡೋಂಟ್ ಗಿವ್ ಅಪ್, ಮುಂದಕ್ಕೆ ಸಾಗೋಣ' ಕೃತಿಯನ್ನು ಭಾನುವಾರ ಗೂಗಲ್ ಮೀಟ್‌ ಮೂಲಕ ಬಿಡುಗಡೆ ಮಾಡಲಾಯಿತು.

ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿರಿಕನ್ನಡ ನುಡಿ ಬಳಗ, ನೌಕರರ ಸಂಘದ ಕಲಾ, ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ 100ಕ್ಕೂ ಹೆಚ್ಚು ಶಿಕ್ಷಕರು, ಸಾಹಿತ್ಯಾಸಕ್ತರ ಹಾಜರಿಯಲ್ಲಿ ಶಿಕ್ಷಕ ನಾರಾಯಣ ಭಾಗವತ ಕೃತಿ ಬಿಡುಗಡೆಗೊಳಿಸಿದರು.

'ಕೊನೆಯ ಬೆಂಚಿನ ವಿದ್ಯಾರ್ಥಿಯಲ್ಲಿಯೂ ಆತ್ಮಸ್ಥೈರ್ಯ ತುಂಬುತ್ತ, ಸಾಧನೆಗೆ ಯಾವುದೂ ಅಡ್ಡಿಯಾಗಲಾರದು, ಆದರೆ, ನಕಾರಾತ್ಮಕ ಚಿಂತನೆಗಳಿಂದ ಹೊರಬರಬೇಕು ಎನ್ನುವ ಸಂದೇಶವನ್ನು ಗಂಗಾಧರ ನಾಯ್ಕ, ಚೊಚ್ಚಲ ಕೃತಿಯಲ್ಲಿ ಹೇಳಿದ್ದಾರೆ. ಖಂಡಿತವಾಗಿಯೂ ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿದೆ' ಎಂದರು.

ADVERTISEMENT

'ಕೋವಿಡ್ ಕಾರಣಕ್ಕೆ ಅಂತರ್ಜಾಲದ ಮೂಲಕ ಎಲ್ಲರೂ ಭೇಟಿಯಾಗಿದ್ದೇವೆ. ಪ್ರೌಢಶಾಲೆಯ ಹಂತಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಹಲವು ಗೊಂದಲಗಳಿರುತ್ತವೆ. ಸಾಮಾಜಿಕ ಹಿನ್ನೆಲೆಯೂ ಪ್ರಭಾವ ಬೀರುತ್ತದೆ. ಕೆಲವರು ಇವುಗಳನ್ನು ಎದುರಿಸಲಾಗದೇ, ಅರ್ಧಕ್ಕೆ ಶಾಲೆ ಬಿಡುತ್ತಾರೆ. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಸಮಾಜದ 20 ಸಾಧಕರ ಕುರಿತು ಪ್ರೇರಣೆ ನೀಡುವಂತಹ ಲೇಖನ ಬರೆಯಲಾಗಿದೆ' ಎಂದು ಕೃತಿಕಾರ ಗಂಗಾಧರ ನಾಯ್ಕ ಹೇಳಿದರು.
ಕನ್ನಡ ಭಾಷಾ ಶಿಕ್ಷಕ ಸಿ.ಪಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿಷ್ಣು ಪಟಗಾರ ಕೃತಿ ಪರಿಚಯಿಸಿದರು. ಫಕ್ಕೀರಪ್ಪ ಕಮದೋಡ, ಕಾಳಿದಾಸ ಬಡಿಗೇರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.