ADVERTISEMENT

ಪಠ್ಯದಾಚೆಯ ಪುಸ್ತಕಗಳಿಂದ ಮನೋವಿಕಾಸ: ಡಾ. ಎಂ.ಜಿ. ಹೆಗಡೆ

ಶಾಲಾ ಪಠ್ಯ-ಪುಸ್ತಕ ಸಮಿತಿಗಳ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 13:55 IST
Last Updated 28 ಡಿಸೆಂಬರ್ 2023, 13:55 IST
ಕುಮಟಾದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಪುಸ್ತಕ ಮೇಳವನ್ನು ಶಾಲಾ ಪಠ್ಯ-ಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ ವೀಕ್ಷಿಸಿದರು
ಕುಮಟಾದ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ಪುಸ್ತಕ ಮೇಳವನ್ನು ಶಾಲಾ ಪಠ್ಯ-ಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ ವೀಕ್ಷಿಸಿದರು   

ಕುಮಟಾ: ‘ಪಠ್ಯದ ಆಚೆಯ ಎಷ್ಟೋ ಉತ್ತಮ ಪುಸ್ತಕಗಳನ್ನು ವಿದ್ಯಾರ್ಥಿ ಓದಿ ಅದರ ಅನುಭವವನ್ನು ಸ್ನೇಹಿತರು, ಶಿಕ್ಷಕರ ಜೊತೆ ಹಂಚಿಕೊಂಡರೆ ಅವರ ಜ್ಞಾನ ಹಿಗ್ಗಿ ಸಮಾಜದ ಪರಿಚಯವಾಗುತ್ತದೆ’ ಎಂದು ಶಾಲಾ ಪಠ್ಯ-ಪುಸ್ತಕ ಸಮಿತಿಗಳ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ ಹೇಳಿದರು.

ಇಲ್ಲಿಯ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಸಪ್ನಾ ಬುಕ್ ಹೌಸ್ ವತಿಯಿಂದ ಗುರುವಾರ ಆರಂಭವಾದ ಮೂರು ದಿನಗಳ ಪುಸ್ತಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಮೇಲೆ ಪಾಲಕರಿಂದ, ಉದ್ಯೋಗಪತಿಗಳಿಂದ ಇಂಥದ್ದೇ ಪಠ್ಯ ಓದಬೇಕು ಎನ್ನುವ ಸಹಜ ಒತ್ತಡ ಇರುತ್ತದೆ. ಓದಿದ್ದನ್ನು ಪರೀಕ್ಷೆಯಲ್ಲಿ ಬರೆದು ಪುನರುತ್ಪತ್ತಿ ಮಾಡಿ ಹೆಚ್ಚು ಅಂಕ ತೆಗೆಯುವ ಪ್ರಕ್ರಿಯೆಯಲ್ಲಿ ಅವರ ಮನಸ್ಥಿತಿ ಕುಗ್ಗುತ್ತದೆ. ಪಠ್ಯದಾಚೆ ಇರುವ ಅನೇಕ ಉತ್ತಮ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಿ, ಚರ್ಚಿಸಿದರೆ ಸಹಜವಾಗಿ ಅವರ ಮನೋವಿಕಾಸವಾಗುತ್ತದೆ. ಅಂಥ ಅವಕಾಶವನ್ನು ಶಾಲೆಯಲ್ಲಿ ಕಲ್ಪಿಸುತ್ತಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ’ ಎಂದರು.

ADVERTISEMENT

ಸಂಸ್ಥೆ ಅಧ್ಯಕ್ಷ ವಿ.ಆರ್. ನಾಯಕ, ಪದಾಧಿಕಾರಿಗಳಾದ ರಮೇಶ ಪ್ರಭು, ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಸಂಸ್ಥೆಯ ಹಳೆಯ ವಿದ್ಯಾರ್ಥಿ ಅಹಲ್ಯಾ ಹೆಗಡೆ, ಉಪನ್ಯಾಸಕಿ ಫರ್ಜಾನ್ ಶೇಖ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.