ಭಟ್ಕಳ: ಇತ್ತೀಚಿಗೆ ಕಾರವಾರದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಟ್ಕಳದ ತಂಡ ನಾಟಕ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಶಿರಾಲಿಯ ಶ್ರೀವಲಿ ಪ್ರೌಢಶಾಲೆಯ ಶಿಕ್ಷಕ ನಾರಾಯಣ ನಾಯ್ಕ ನಿರ್ದೇಶಿಸಿದ ಕಂಬನಿ ಎಂಬ ಸಾಮಾಜಿಕ ನಾಟಕ ಎಲ್ಲರ ಮೆಚ್ಚುಗೆ ಪಡೆಯಿತು. ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಕಲಾಭಿಮಾನಿಗಳ ಮನ ಗೆಲ್ಲುವಲ್ಲಿ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದರು.
ಕಲಾವಿದರಾದ ವೆಂಕಟೇಶ ನಾಯ್ಕ, ದೇವರಾಯ ದೇವಡಿಗ, ಉಮೇಶ ಕೆರೆಕಟ್ಟೆ, ದಾಸ ಶೆಟ್ಟಿ, ವಸಂತ ನಾಯ್ಕ, ನಾಗರಾಜ ಅಂಬಿಗ, ನಾಗೇಶ ಭಟ್, ಜನಾರ್ಧನ ಮೊಗೇರ, ವಿಜಯ ಕುಮಾರ ನಾರ್ವೇಕರ್, ಮಹೇಶ ತೆರ್ನಮಕ್ಕಿ, ನಾಗಪ್ಪಯ್ಯ ಆಚಾರಿ, ಯು.ಎ.ಲೊಹಾನಿ, ಬಿ.ಕೆ.ನಾಯ್ಕ ತಮ್ಮ ಕಲಾ ಪ್ರದರ್ಶನಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.