ADVERTISEMENT

ಮುಂಡಗೋಡ: ಸಂಭ್ರಮದ ಈದ್ ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:34 IST
Last Updated 16 ಸೆಪ್ಟೆಂಬರ್ 2024, 15:34 IST
ಮುಂಡಗೋಡದಲ್ಲಿ ಮುಸ್ಲಿಮರು ಈದ್‌ ಮಿಲಾದ್‌ಅನ್ನು ಸಂಭ್ರಮದಿಂದ ಆಚರಿಸಿದರು
ಮುಂಡಗೋಡದಲ್ಲಿ ಮುಸ್ಲಿಮರು ಈದ್‌ ಮಿಲಾದ್‌ಅನ್ನು ಸಂಭ್ರಮದಿಂದ ಆಚರಿಸಿದರು   

ಮುಂಡಗೋಡ: ಪ್ರವಾದಿ ಮಹಮ್ಮದ ಪೈಗಂಬರ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಅನ್ನು ತಾಲ್ಲೂಕಿನಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ನೂರಾನಿ ಮಸೀದಿ ಹತ್ತಿರ ಸೇರಿದ ಐದು ಮಸೀದಿಯ ಮುಖಂಡರು ಹಾಗೂ ಮುಸ್ಲಿಮರು ಈದ್‌ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಅಲ್ಹಾನ ನಾಮಸ್ಮರಣೆ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಮುಹಮ್ಮದ್ ಪೈಗಂಬರ ಅವರು ನಡೆದು ಬಂದ ದಾರಿ ಹಾಗೂ ಜನರಿಗೆ ನೀಡಿರುವ ಸಂದೇಶಗಳನ್ನು ಸಾರುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿದರು. ಮೂರು ತಾಸಿಗೂ ಅಧಿಕ ಕಾಲ ಮೆರವಣಿಗೆ ನಡೆಯಿತು. ಈದ್‌ ಮಿಲಾದ್ ಅಂಗವಾಗಿ ಮಸೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಪ್ರಮುಖ ಓಣಿಗಳಲ್ಲಿ ಹಸಿರು ಝೆಂಡಾಗಳು ರಾರಾಜಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT