ADVERTISEMENT

ಗಾಳಿಗೆ ಬುಡಮೇಲಾದ ವಿದ್ಯುತ್ ಕಂಬ: ಕತ್ತಲಲ್ಲಿ ಕಾರವಾರ

ಶೇಜವಾಡ ಸಮೀಪದ ಗುಡ್ಡದಲ್ಲಿ ಹಾದುಹೋಗಿರುವ 33 ಕೆ.ವಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 14:33 IST
Last Updated 12 ಜೂನ್ 2019, 14:33 IST
ಕಾರವಾರ ತಾಲ್ಲೂಕಿನ ಶೇಜವಾಡ ಸಮೀಪದ ಗುಡ್ಡದ ಮೇಲೆ ಬುಧವಾರ ಬೀಸಿದ ರಭಸದ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು.
ಕಾರವಾರ ತಾಲ್ಲೂಕಿನ ಶೇಜವಾಡ ಸಮೀಪದ ಗುಡ್ಡದ ಮೇಲೆ ಬುಧವಾರ ಬೀಸಿದ ರಭಸದ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು.   

ಕಾರವಾರ:ನಗರದಸುತ್ತಮುತ್ತಬುಧವಾರ ಮಧ್ಯಾಹ್ನ ಬೀಸಿದ ರಭಸದ ಗಾಳಿಯು ಇಲ್ಲಿನ ವಿದ್ಯುತ್ ಸಂಪರ್ಕವನ್ನೇ ಬುಡಮೇಲು ಮಾಡಿದೆ. ಶೇಜವಾಡ ಸಮೀಪದ ಗುಡ್ಡದತುದಿಯಲ್ಲಿಅಳವಡಿಸಲಾಗಿರುವ ಎರಡು ಬೃಹತ್ ವಿದ್ಯುತ್ ಕಂಬಗಳು ನೆಲಕ್ಕೆ ಒರಗಿವೆ.

ಇದರ ಪರಿಣಾಮ ಶೇಜವಾಡದಿಂದ ನಗರಕ್ಕೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ ಮಾರ್ಗದಲ್ಲಿ ಈ ಕಂಬಗಳಿವೆ.ವಿದ್ಯುತ್ ಮಾರ್ಗದ ನಿರ್ವಹಣೆಯ ದಿನವೂ ಬುಧವಾರವೇ ಆಗಿರುವ ಕಾರಣ ಬೆಳಿಗ್ಗೆ 10ರಿಂದಲೇ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ಇದರೊಂದಿಗೆ ಕಂಬಗಳೂಮುರಿದ ಕಾರಣ ನಗರಕ್ಕೆ ರಾತ್ರಿಯವರೆಗೂ ವಿದ್ಯುತ್‍ಪೂರೈಕೆ ಇರಲಿಲ್ಲ.

ಹೆಸ್ಕಾಂ ಸಿಬ್ಬಂದಿ ಶ್ರಮ: ವಿಷಯ ತಿಳಿದ ಕೂಡಲೇ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಸ್ಥಳಕ್ಕೆತೆರಳಿದರು. ನೆಲಕ್ಕೆ ಉರುಳಿದ ಕಂಬಗಳನ್ನು ತೆರವು ಮಾಡಿ ಹೊಸದಾಗಿ ಕಂಬಗಳನ್ನು ಅಳವಡಿಸಿತಂತಿಗಳನ್ನು ಜೋಡಿಸಿದರು. ನಗರಕ್ಕೆಪುನಃ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಜೊತೆಗೆ ಹೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಬಿ.ಇಡೂರ್ಕರ್ ಹಾಗೂಇತರ ಅಧಿಕಾರಿಗಳೂ ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದರು.

ADVERTISEMENT

ಕಂಬಗಳು ಗುಡ್ಡದ ಮೇಲೆ ಇದ್ದು, ಅಲ್ಲಿಗೆ ತಲುಪುವ ದಾರಿಯಲ್ಲಿಪೊದೆಗಳು ಬೆಳೆದಿವೆ. ಹಾಗಾಗಿ ದುರ್ಗಮ ಹಾದಿಯಲ್ಲಿ ಅಗತ್ಯ ಸಲಕರಣೆಗಳನ್ನು ತೆಗೆದುಕೊಂಡು ಹೋಗಲು‌ಹೆಚ್ಚಿನ ಸಮಯ ಬೇಕಾಯಿತು. ವಿದ್ಯುತ್ ಸಂಪರ್ಕ ಕೊಡಲು ಸಂಜೆ 7.30ರವರೆಗೆ ಸುಮಾರು ಆರು ಗಂಟೆಗೂ ಅಧಿಕ ಕಾಲ ಹೆಸ್ಕಾಂ ಸಿಬ್ಬಂದಿ ಶ್ರಮಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.