ADVERTISEMENT

ಕಾದಾಟ: ಗಂಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 11 ಮೇ 2022, 15:32 IST
Last Updated 11 ಮೇ 2022, 15:32 IST
ಜೋಯಿಡಾ ತಾಲ್ಲೂಕಿನ ಕುಳಗಿಯಲ್ಲಿ ಮೃತಪಟ್ಟ ಆನೆಯ ಮೃತದೇಹವನ್ನು ಪಶು ವೈದ್ಯರು ಪರೀಕ್ಷಿಸಿದರು.
ಜೋಯಿಡಾ ತಾಲ್ಲೂಕಿನ ಕುಳಗಿಯಲ್ಲಿ ಮೃತಪಟ್ಟ ಆನೆಯ ಮೃತದೇಹವನ್ನು ಪಶು ವೈದ್ಯರು ಪರೀಕ್ಷಿಸಿದರು.   

ಜೋಯಿಡಾ (ಉತ್ತರ ಕನ್ನಡ): ತಾಲ್ಲೂಕಿನ ಕುಳಗಿ ವನ್ಯ ಜೀವಿ ವಲಯದಲ್ಲಿ ಎರಡು ಗಂಡಾನೆಗಳ ನಡುವೆ ಪರಸ್ಪರ ಕಾದಾಟ ನಡೆದ ಪರಿಣಾಮ 38 ರಿಂದ 40 ವರ್ಷ ವಯಸ್ಸಿನ ಆನೆಯೊಂದು ಮೃತಪಟ್ಟಿದೆ.

‘ಆನೆಯ ತಲೆ ಭಾಗಕ್ಕೆ ಬಲವಾದ ಏಟು ಬಿದ್ದಿದ್ದರಿಂದ ಅದು ಮೃತಪಟ್ಟಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ಜೋಯಿಡಾ ಪಶು ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ ತಿಳಿಸಿದ್ದಾರೆ. ಕುಳಗಿ ಅರಣ್ಯದಲ್ಲಿ ಆನೆಯ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಎಸಿಎಫ್ ಶಿವಾನಂದ ತೋಡ್ಕರ, ಆರ್.ಎಫ್.ಒ. ಅಭಿಷೇಕ ನಾಯ್ಕ, ರವಿಕಿರಣ ಸಂಪಗಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT