ಅಂಕೋಲಾ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಕೊಳೆ ರೋಗ ಸೇರಿದಂತೆ ಪ್ರಾಕೃತಿಕ ಸಮಸ್ಯೆಯಿಂದ ಅಡಿಕೆ ಇಳುವರಿ ಕುಂಟಿತವಾಗಿ, ರೈತರು ನಷ್ಟಕ್ಕೀಡಾಗಿದ್ದಾರೆ’ ಎಂದು ಇಲ್ಲಿನ ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಳೆ ರೋಗ ಹಾಗೂ ರೈತರ ಇನ್ನಿತರೆ ಸಮಸ್ಯೆ ನಿವಾರಣೆ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಿದರು. ಇದರಿಂದ ರೈತರ ಖಾತೆಗೆ ಹಂತ ಹಂತವಾಗಿ ಪರಿಹಾರ ಹಣ ಜಮಾ ಆಗಿದೆ’ ಎಂದರು.
ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ, ಸಂಜಯ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ನಾಯ್ಕ, ಶ್ರೀಧರ ನಾಯ್ಕ, ಪುರಸಭೆ ಸದಸ್ಯರಾದ ನಾಗರಾಜ ಐಗಳ, ತಾರಾ ನಾಯ್ಕ, ದಾಮೋದರ ರಾಯ್ಕರ, ರಾಘವೇಂದ್ರ ಭಟ್ಟ, ಮಂಕಾಳು ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.