ADVERTISEMENT

ಭಟ್ಕಳ | ಹೊಸ ಮೀನು ಮಾರುಕಟ್ಟೆ: ಗ್ರಾಹಕರ ಸಂಖ್ಯೆ ವಿರಳ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:04 IST
Last Updated 10 ಸೆಪ್ಟೆಂಬರ್ 2025, 7:04 IST
ಬಟ್ಕಳದ ಹಳೇ ಮೀನು ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ನಿರತರಾಗಿದ್ದರು
ಬಟ್ಕಳದ ಹಳೇ ಮೀನು ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ನಿರತರಾಗಿದ್ದರು   

ಭಟ್ಕಳ: ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿರುವ ಹಳೆಯ ಮೀನು ಮಾರುಕಟ್ಟೆ ಶಿಥಿಲಾವಸ್ಥೆ ತಲುಪಿದೆ ಎಂಬ ಕಾರಣಕ್ಕೆ ಪುರಸಭೆಯು ಸಂತೆ ಮಾರುಕಟ್ಟೆ ಬಳಿ ಹೊಸ ಮೀನು ಮಾರುಕಟ್ಟೆ ಸ್ಥಾಪಿಸಿದ್ದರೂ, ಅಲ್ಲಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ವಿರಳವಾಗಿದೆ.

ಮೀನುಗಾರ ಮಹಿಳೆಯರು ಹೊಸ ಮೀನು ಮಾರುಕಟ್ಟೆಗೆ ಹೋಗಲು ನಿರಾಕರಿಸಿದ ಕಾರಣ ಸಚಿವ ಮಂಕಾಳ ವೈದ್ಯ ಅವರ ಸೂಚನೆಯಂತೆ ಎರಡೂ ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸ ಮೀನು ಮಾರುಕಟ್ಟೆ ತೆರೆದು ಒಂಬತ್ತು ದಿನ ಕಳೆದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದು ಇಲ್ಲಿನ ಮೀನು ಮಾರಾಟಗಾರರಿಗೆ ನಿರಾಸೆ ಉಂಟು ಮಾಡಿದೆ.

‘ಹೊಸ ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಮೀನು ಖರೀದಿ, ವಾಹನ ನಿಲುಗಡೆ ಹಾಗೂ ಶುಚಿತ್ವಕ್ಕೂ ಆದ್ಯತೆ ನೀಡಲಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗುತ್ತಿದೆ.

ADVERTISEMENT

‘ಹಳೇ ಮಾರುಕಟ್ಟೆಯಲ್ಲಷ್ಟೇ ತಾಜಾ ಮೀನುಗಳು ಸಿಗುತ್ತವೆ ಎನ್ನುವ ಭಾವನೆ ಜನರಲ್ಲಿದೆ. ಸ್ಥಳೀಯ ಮೀನು ವ್ಯಾಪಾರ ಮಾಡುವ ಮಹಿಳೆಯರು ಬಂದರಿನಿಂದ ತಾಜಾ ಮೀನು ಖರೀದಿಸಿ, ಅಲ್ಲಿ ಮಾಡುವ ಕಾರಣ ಹೆಚ್ಚಿನ ಜನರು ಹಳೇ ಮೀನು ಮಾರುಕಟ್ಟೆ ಹೋಗುತ್ತಾರೆ’ ಎಂದು ಮೀನಿನ ವ್ಯಾಪಾರಿ ಮಂಜಮ್ಮಾ ಮೊಗೇರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.