ADVERTISEMENT

ಕಾರವಾರ: ಜನರ ಮನಸೆಳೆದ ಹಗರಣ ರೂಪಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 3:15 IST
Last Updated 8 ಡಿಸೆಂಬರ್ 2025, 3:15 IST
ಕಾರವಾರ ತಾಲ್ಲೂಕಿನ ನಗೆ ಗ್ರಾಮದಲ್ಲಿ ನಡೆದ ಹಗರಣದಲ್ಲಿ ಬೃಹತ್ ಗಾತ್ರದ ಕಲಾಕೃತಿ ಪ್ರದರ್ಶಿಸಲಾಯಿತು
ಕಾರವಾರ ತಾಲ್ಲೂಕಿನ ನಗೆ ಗ್ರಾಮದಲ್ಲಿ ನಡೆದ ಹಗರಣದಲ್ಲಿ ಬೃಹತ್ ಗಾತ್ರದ ಕಲಾಕೃತಿ ಪ್ರದರ್ಶಿಸಲಾಯಿತು   

ಕಾರವಾರ: ತಾಲ್ಲೂಕಿನ ನಗೆ ಗ್ರಾಮದ ಉದ್ಭವಲಿಂಗ ದೇವರ ಜಾತ್ರೆಯ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಹಗರಣ ರೂಪಕ ಪ್ರದರ್ಶನ ಗಮನಸೆಳೆಯಿತು.

ಗ್ರಾಮದಲ್ಲಿರುವ ಹಾಲಕ್ಕಿ ಒಕ್ಕಲಿಗ ಸಮುದಾಯದ ಜನರು ಜಾತ್ರೆಯ ವೇಳೆ ಪ್ರದರ್ಶಿಸುವ ಹಗರಣ ಆಕರ್ಷಕ ಪ್ರತಿಕೃತಿಗಳನ್ನು ಒಳಗೊಂಡಿರುವ ಕಾರಣ, ಹಗರಣ ಕಳ್ತುಂಬಿಕೊಳ್ಳಲು ನೂರಾರು ಜನರು ಪಾಲ್ಗೊಂಡಿದ್ದರು. ದೂರದ ಊರುಗಳಿಂದಲೂ ಜನರು ಗ್ರಾಮಕ್ಕೆ ಭೇಟಿ ನೀಡಿದ್ದರು.

ಗ್ರಾಮಸ್ಥರೇ ಶ್ರಮದಿಂದ ಸಿದ್ಧಪಡಿಸಿದ ಕಲಾಕೃತಿಗಳನ್ನು ಉದ್ಭವಲಿಂಗ ಗುಡಿಯ ಸಮೀಪದ ಬಯಲಿನಲ್ಲಿ ಮೆರವಣಿಗೆ ನಡೆಸಿ ಪ್ರದರ್ಶಿಸಲಾಯಿತು. ಪ್ರಸಕ್ತ ಸನ್ನಿವೇಶಗಳನ್ನು ವಿಡಂಬನಾತ್ಮಕವಾಗಿ ಬಿಂಬಿಸಲು ಹಗರಣ ವೇದಿಕೆ ಆಗುತ್ತಿದ್ದು, ವಿವಿಧ ಬಗೆಯ ವೇಷಧರಿಸಿದ್ದವರು ಕಲಾಕೃತಿಗಳ ಮೆರವಣಿಗೆಯೊಟ್ಟಿಗೆ ಹೆಜ್ಜೆ ಹಾಕುತ್ತ ಜನರನ್ನು ರಂಜಿಸುವುದು ವಿಶೇಷ ಎನಿಸಿತು.

ADVERTISEMENT

ದೈತ್ಯಾಕಾರದ ಪ್ರಾಣಿಗಳು, ಕಾಡು ಮನುಷ್ಯರ ಪ್ರತಿಕೃತಿಗಳು, ಸೇರಿದಂತೆ ಹಲವು ಬಗೆಯ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಕಲಾಕೃತಿಗಳನ್ನು ಸಿದ್ಧಪಡಿಸಲು ತಗಲುವ ಸಾವಿರಾರು ರೂಪಾಯಿ ವೆಚ್ಚವನ್ನು ಗ್ರಾಮಸ್ಥರೇ ಭರಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.