ADVERTISEMENT

ಭಟ್ಕಳ: ಅರಣ್ಯವಾಸಿಗಳ ಬೃಹತ್ ರ‍್ಯಾಲಿ ಡಿ.6ರಂದು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:16 IST
Last Updated 23 ನವೆಂಬರ್ 2025, 5:16 IST
ಭಟ್ಕಳದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಭೆ ನಡೆಯಿತು
ಭಟ್ಕಳದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಭೆ ನಡೆಯಿತು   

ಭಟ್ಕಳ: ‘ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಡಿ.6ರಂದು ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ರ‍್ಯಾಲಿ ಸಂಘಟಿಸುವ ಮೂಲಕ ಭೂಮಿ ಹಕ್ಕು ಸಂವಿಧಾನ ಬದ್ಧ ಹಕ್ಕು ಎಂದು ಪ್ರತಿಪಾದಿಸಿ, ಅಂದು ಅಂಬೇಡ್ಕರ್ ಪರಿವರ್ತನಾ ದಿನಾಚರಣೆ ಮಾಡಲಾಗುವುದು’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳೀದರು.

ಇಲ್ಲಿನ ಕೋಲಾ ಪ್ಯಾರಡೈಸ್ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಅರಣ್ಯವಾಸಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಅರಣ್ಯವಾಸಿಗಳಲ್ಲಿ ಕಾನೂನು ಅರಿವು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ಅಂಗವಾಗಿ ಕಾರವಾರದಲ್ಲಿ ಬೃಹತ್ ಸಮಾವೇಶ ಜರುಗಲಿದೆ. ಅರಣ್ಯ ಹಕ್ಕು ಕಾಯಿದೆ ಜಾಗೃತಾ ಜಾಥಾ ರಾಜ್ಯದ 16 ಜಿಲ್ಲೆಗಳಲ್ಲಿ ಅರಣ್ಯ ಹಕ್ಕು ಕಾಯಿದೆಗೆ ಸಂಬಂಧಿಸಿ ಐದು ಲಕ್ಷ ಕರಪತ್ರಗಳನ್ನು ಅರಣ್ಯವಾಸಿಗಳಿಗೆ ರಾಜ್ಯದಾದ್ಯಂತ ಬಿತ್ತರಿಸಲಾಗುವುದು’ ಎಂದು ತಿಳಿದರು.

ADVERTISEMENT

ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಮಾತನಾಡಿದರು.

ಪ್ರಮುಖರಾದ ಚಂದ್ರು ನಾಯ್ಕ ಬೆಳಕೆ.ಕೆ, ವೆಂಕಟ ನಾಯ್ಕ, ಶಿವು ಮರಾಠಿ, ಕುಪ್ಪಯ್ಯ ಭಂಡಾರಿ, ಗಣೇಶ ಕಲ್ಯಾಣಿ, ಶಂಕರ ನಾಯ್ಕ, ದೇವಿಚಂದ್ರ ಗೊಂಡ, ಸಾದಿಯಾ ಹೆಬಳೆ, ಶ್ರೀದರ ಮಣ್ಕುಳಿ, ಗುಂಡು ಆಚಾರಿ, ಗಿರಿಜಾ ಮೋಗೇರ್, ದೇವಕಿ ಮೋಗೇರ, ವಿಮಲಾ ಮೋಗೇರ, ಕೈರುನ್ನಿಸಾ, ಅಲಿಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.