
ಅಂಕೋಲಾ: ‘ಅರಣ್ಯ ಭೂಮಿ ಹಕ್ಕು ನೀಡಲು ಮೂರು ತಲೆಮಾರಿನ ದಾಖಲೆ ಕೇಳಿರುವುದು ಯೋಗ್ಯವಲ್ಲ. ಚಳಿಗಾಲ ಅಧಿವೇಶನದಲ್ಲಿ ಈ ಕುರಿತು ತಿದ್ದುಪಡಿ ಮಾಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಆಗ್ರಹಿಸಿದರು.
ತಾಲ್ಲೂಕಿನ ಬಾಳೆಗುಳಿ ಗ್ರಾಮದಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ವತಿಯಿಂದ ಗುರುವಾರ ನಡೆದ ಗ್ರಾಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಕಾನೂನು ಜಾರಿಯಾಗಿ 20 ವರ್ಷ ಕಳೆದರೂ ಇದುವರೆಗೂ ರೈತರಿಗೆ ಭೂಮಿ ಸಿಕ್ಕಿಲ್ಲ. ಮೂರು ತಲೆಮಾರಿನ ದಾಖಲೆ ಸಲ್ಲಿಸಿದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ. ಕಾನೂನು ತಿದ್ದುಪಡಿ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಅವರು ಚಳಿಗಾಲ ಅಧಿವೇಶನದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು’ ಎಂದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ ಮಾತನಾಡಿದರು. ಕಾರ್ಯದರ್ಶಿ ಸಂತೋಷ ನಾಯ್ಕ, ವೆಂಕಟರಮಣ ಗೌಡ, ಮಾದೇವ ಗೌಡ, ಬಾಳೆಗುಳಿ ಗ್ರಾಮ ಸಮಿತಿ ಅಧ್ಯಕ್ಷ ವಿಠ್ಠಲ ಗೌಡ, ಉಪಾಧ್ಯಕ್ಷ ಮಹಾದೇವ ನಾಯ್ಕ, ಕಾರ್ಯದರ್ಶಿ ಮೀನಾಕ್ಷಿ ಗೌಡ, ಲೋಕೇಶ್ ಶೆಡಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.