ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಕುಮಟಾ : ತಾಲ್ಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಮಂಜೂರಿಗೆ ಸಲ್ಲಿಸಿದ 6,630 ಅರ್ಜಿಗಳು ತಿರಸ್ಕೃತಗೊಂಡಿದ್ದು, ಅ. 4 ರಂದು ಮೇಲ್ಮನವಿ ಸಲ್ಲಿಸಲು ಶಿರಸಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕುಮಟಾ ತಾಲ್ಲೂಕು ಘಟಕ ಅಧ್ಯಕ್ಷ ಮಂಜು ಮರಾಠಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಸಭೆಯಲ್ಲಿ ಮಾತನಾಡಿ, ‘ಒಟ್ಟೂ 6630 ಅರ್ಜಿಗಳಲ್ಲಿ 137 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ‘ಅರಣ್ಯ ಹಕ್ಕು ಸಮಿತಿಗೆ ಸಂಬಂಧಿಸಿ ಅಸ್ತಿತ್ವದಲ್ಲಿ ಇಲ್ಲದ ಅರಣ್ಯ ಹಕ್ಕು ಸಮಿತಿಯು ವಿಚಾರಣೆ ನಡೆಸಿ ನೊಟೀಸ್ ನೀಡದೆ ಜಿಲ್ಲೆಯಲ್ಲಿ 73,206 ಅರ್ಜಿಗಳನ್ನು ತಿರಸ್ಕರಿಸಿದೆ. ಇದಕ್ಕಾಗಿ ಅರಣ್ಯ ಹಕ್ಕು ಹೋರಾಟಗಾರರು ಪ್ರತಿ ತಾಲ್ಲೂಕಿನಿಂದ ಮೇಲ್ಮನವಿ ಸಲಿಸಲು ತೆರಳುತ್ತಿರುವುದು ಅನಿವಾರ್ಯ’ ಎಂದರು.
ತಾಲ್ಲೂಕು ಪದಾಧಿಕಾರಿಗಳಾದ ಮಹೇಂದ್ರ ನಾಯ್ಕ, ಗಜಾನನ ನಾಯ್ಕ, ಅಮೋಜ್ ಮಲ್ಲಾಪುರ, ಸೀತಾರಾಂ ನಾಯ್ಕ, ಶಂಖರ ಗೌಡ, ಯಾಕೂಬ್ ಸಾಬ್, ಜಗದೀಶ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.