ADVERTISEMENT

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ತಿಂಗಳಲ್ಲಿ ನಾಲ್ಕು ಕಾಡುಕೋಣ ಸಾವು

ಜೊಯಿಡಾ ತಾಲ್ಲೂಕಿನ ಸಂರಕ್ಷಿತ ಪ್ರದೇಶದಲ್ಲಿ ಮರಣ ಮೃದಂಗ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 13:33 IST
Last Updated 1 ಜೂನ್ 2019, 13:33 IST
ಜೊಯಿಡಾ ತಾಲ್ಲೂಕಿನ ದೀಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣವನ್ನು ಶನಿವಾರ ಮರಣೋತ್ತರ ಪರೀಕ್ಷೆ ಮಾಡಲಾಯಿತು
ಜೊಯಿಡಾ ತಾಲ್ಲೂಕಿನ ದೀಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣವನ್ನು ಶನಿವಾರ ಮರಣೋತ್ತರ ಪರೀಕ್ಷೆ ಮಾಡಲಾಯಿತು   

ಜೊಯಿಡಾ:ತಾಲ್ಲೂಕಿನಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಕಾಡುಕೋಣಗಳ ಸಾವು ಮುಂದುವರಿದಿದೆ. ಬರಪಾಲಿ ಸಮೀಪದ ದೀಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣದ ಅಂತ್ಯಕ್ರಿಯೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ನೆರವೇರಿಸಿದರು. ಅಂದಾಜು 12 ವರ್ಷ ಪ್ರಾಯದ ಇದು, ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ.

ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರಅಣಶಿ ವನ್ಯಜೀವಿ ವಲಯದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಕಾಡುಕೋಣಗಳು ಮೃತಪಟ್ಟಿವೆ.ಕಟ್ಟೆ, ಕೋಡುಗಾಳಿ, ಕಡಗರ್ಣಿಯಲ್ಲೂ ಈ ಮೊದಲು ಕಳೇಬರಗಳು ಸಿಕ್ಕಿದ್ದವು. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ಹಾಗೂ ಕುಂಬಾರವಾಡಾವಲಯದಲ್ಲಿಕಾಡುಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

‘ನೀರಿನ ಕೊರತೆ ಕಾರಣವಲ್ಲ’:‘ಅಣಶಿ ವನ್ಯಜೀವಿ ವಲಯದಲ್ಲಿ ಕಾಡುಕೋಣಗಳ ಸಾವಿಗೆ ನೀರಿನ ಸಮಸ್ಯೆ ಕಾರಣವಲ್ಲ’ ಎಂದು ಕುಂಬಾರವಾಡ ವಲಯದ ಸಹಾಯಕ ಸಂರಕ್ಷಣಾಧಿಕಾರಿಎಸ್.ತೋಡಕರ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ದೀಗಾಳಿಯಲ್ಲಿ ಕಾಡುಕೋಣ ಸತ್ತಿರುವ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲೇ ವನ್ಯಪ್ರಾಣಿಗಳಿಗಾಗಿ ನಿರ್ಮಿಸಲಾದ ‘ಟೈಗರ್ ಟ್ಯಾಂಕ್’ (ಕೆರೆ) ಇದೆ. ಅದರಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಆದರೆ, ಅವುಗಳ ಸಾವಿಗೆ ನಿರ್ದಿಷ್ಟ ಕಾರಣವೇನು ಎಂಬುದು ವೈದ್ಯಕೀಯ ವರದಿ ಬಂದ ನಂತರವೇ ತಿಳಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.

ದಿಗಾಳಿ ಕಾಡಿನಲ್ಲಿ ಮೃತ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗದ ವನ್ಯಜೀವಿ ವಲಯದ ಪಶುವೈದ್ಯಾಧಿಕಾರಿ ವೈದ್ಯ ಡಾ.ವಿನಯ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅದರ ಅಂಗಾಂಗಳಮಾದರಿಯನ್ನು ಪರೀಕ್ಷೆಗಾಗಿ ಅವರು ತೆಗೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶಿರಸಿ ವಿಭಾಗದ ಸಹಾಯಕ ನಿರ್ದೇಶಕ ಡಾ.ದೇವೇಂದ್ರ ಲಮಾಣಿ, ಕುಂಬಾರವಾಡಾ ಪಶು ವೈದ್ಯಾಧಿಕಾರಿ ಮಲ್ಲೇಶಿಇದ್ದರು.

ಕಾಡುಕೋಣದ ಅಂತ್ಯಕ್ರಿಯೆಯಸಂದರ್ಭದಲ್ಲಿ ಅಣಶಿ ವಲಯ ಅರಣ್ಯಾಧಿಕಾರಿ ಈರೇಶ ಕಬ್ಬಿನ, ಕುಂಬಾರವಾಡ, ಗುಂದ, ಕ್ಯಾಸಲರಾಕ್ ವನ್ಯಜೀವಿ ವಲಯಗಳಅರಣ್ಯಾಧಿಕಾರಿಗಳು, ವನಪಾಲಕರಾದ ರಾಘವೇಂದ್ರ ನಾಯ್ಕ, ಜಗದೀಶ ಮಸಳಿ, ಅರಣ್ಯ ರಕ್ಷಕರು, ಕಾವಲುಗಾರರುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.