ADVERTISEMENT

ಸ್ವಾತಂತ್ರ್ಯ ಹೋರಾಟ ಮರೆಯಲಾಗದು: ಭೀಮಣ್ಣ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 13:02 IST
Last Updated 9 ಆಗಸ್ಟ್ 2021, 13:02 IST
ಶಿರಸಿಯ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ದಿನ ಆಚರಿಸಲಾಯಿತು
ಶಿರಸಿಯ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ದಿನ ಆಚರಿಸಲಾಯಿತು   

ಶಿರಸಿ: ‘ದೇಶಕ್ಕೆ ಸ್ವಾತಂತ್ರ್ಯ ಕೊಡುವಲ್ಲಿ ಕಾಂಗ್ರೆಸ್ ನಾಯಕರ ಹೋರಾಟ ಪ್ರಮುಖ ಪಾತ್ರವಹಿಸಿತ್ತು. ದೇಶ ಸದ್ಯ ಎದುರಿಸುತ್ತಿರುವ ಗಂಡಾಂತರದ ಸ್ಥಿತಿಯಿಂದ ಹೊರಬರಲೂ ಕಾಂಗ್ರೆಸ್ಸಿಗರ ಹೋರಾಟ ಅಗತ್ಯವಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.

‘ಕ್ವಿಟ್ ಇಂಡಿಯಾ ಚಳವಳಿ ದಿನ’ದ ಅಂಗವಾಗಿ ಇಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ದೇಶವನ್ನು ಆಳಿದ ನಾಯಕರ ದೂರದೃಷ್ಟಿತ್ವದ ಯೋಜನೆಗಳ ಪರಿಣಾಮ ಇಂದಿಗೂ ದೇಶ ಸುಭಿಕ್ಷವಾಗಿದೆ. ಈಚೆಗೆ ಅಧಿಕಾರ ಹಿಡಿದವರಿಂದ ಪರಿಸ್ಥಿತಿ ಹದಗೆಟ್ಟಿದೆ. ಬದಲಾವಣೆಯ ಪರ್ವಕ್ಕೆ ಜನ ಕಾಯುತ್ತಿದ್ದಾರೆ’ ಎಂದರು.

ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ, ‘ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ 1942ರ ಕ್ವಿಟ್ ಇಂಡಿಯಾ ಚಳವಳಿ ಅತ್ಯಂತ ಮಹತ್ವದ ಘಟನೆ. ಇದನ್ನು ಸ್ಮರಣೆಯಲ್ಲಿಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದರು.

ADVERTISEMENT

ಪ್ರಮುಖರಾದ ದೀಪಕ ದೊಡ್ದುರು, ಅಬ್ಬಾಸ್ ತೊನ್ಸೆ, ಬಸವರಾಜ ದೊಡ್ಮನಿ, ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ನಾಗರಾಜ ಮುರ್ಡೇಶ್ವರ, ನಾಗರಾಜ ಮಡಿವಾಳ, ದಿವಾಕರ ಹೆಗಡೆ, ರಘು ಬ್ಯಾಗದ್ದೆ, ಶೈಲೇಶ್ ಗಾಂಧಿ, ಪ್ರಸನ್ನ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.