ADVERTISEMENT

ಯಕ್ಷಗಾನ ಕಲಿಕೆಗೆ ಶಾಸ್ತ್ರೀಯ ವ್ಯವಸ್ಥೆ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಸ್ಮರಣೆ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿಶ್ರೀ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 12:38 IST
Last Updated 10 ಜುಲೈ 2022, 12:38 IST
ಶಿರಸಿಯಲ್ಲಿ ನಡೆದ ಎಂ.ಎ.ಹೆಗಡೆ ದಂಟ್ಕಲ್ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಯಕ್ಷಗಾನ ಸ್ವರೂಪ ಮತ್ತು ಲಕ್ಷಣ’ ಕೃತಿಯನ್ನು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಶಿರಸಿಯಲ್ಲಿ ನಡೆದ ಎಂ.ಎ.ಹೆಗಡೆ ದಂಟ್ಕಲ್ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಯಕ್ಷಗಾನ ಸ್ವರೂಪ ಮತ್ತು ಲಕ್ಷಣ’ ಕೃತಿಯನ್ನು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.   

ಶಿರಸಿ: ಸಂಗೀತ, ಭರತನಾಟ್ಯ ಮುಂತಾದ ಕಲೆಗಳಂತೆ ಯಕ್ಷಗಾನ ಕಲಿಕೆಗೂ ಶಾಸ್ತ್ರೀಯ ವ್ಯವಸ್ಥೆ ಹಾಗೂ ಅದಕ್ಕೆ ಪೂರಕ ಪಠ್ಯ ರೂಪಿಸುವ ಅಗತ್ಯವಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎಂ.ಎ.ಹೆಗಡೆ ದಂಟ್ಕಲ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕೃತ ಕಲಿಕಾ ವ್ಯವಸ್ಥೆ ಇದ್ದರೆ ಯುವಜನರು ಆಸಕ್ತಿಯಿಂದ ಕಲಿಯಲು ಮುಂದೆ ಬರಬಹುದು. ಯಕ್ಷಗಾನ ಸಾಹಿತ್ಯಕ್ಕೆ ಹೆಚ್ಚು ಒತ್ತು ಸಿಗಬೇಕಾಗಿದೆ’ ಎಂದರು.

‘ವಿದ್ವಾಂಸರ ಸ್ಮರಣೆ ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು. ಗೋಷ್ಠಿ, ಬರಹದ ಮೂಲಕ ಎಂ.ಎ.ಹೆಗಡೆ ಯಕ್ಷಗಾನ ಕ್ಷೇತ್ರಕ್ಕೆ ಬಲತಂದಿದ್ದರು’ ಎಂದರು.

ADVERTISEMENT

ವಿಧ್ವಾಂಸ ಎಂ.ಪ್ರಭಾಕರ ಜೋಶಿ ಮಾತನಾಡಿ, ‘ವಿಧ್ವಾಂಸನಾಗಿದ್ದರೂ ಎಂ.ಎ.ಹೆಗಡೆ ಸರಳತೆ ಮೈಗೂಡಿಸಿಕೊಂಡಿದ್ದ ಮೇರು ವ್ಯಕ್ತಿತ್ವದವರಾಗಿದ್ದರು. ನೇರ ನುಡಿಯ ಮೂಲಕ ತಪ್ಪುಗಳನ್ನು ಖಂಡಿಸುತ್ತಿದ್ದರು. ಯಕ್ಷ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಮಹತ್ವದ್ದು’ ಎಂದರು.

ಕಾರ್ಯಕ್ರಮದಲ್ಲಿ ‘ಯಕ್ಷಗಾನ ಸ್ವರೂಪ ಮತ್ತು ಲಕ್ಷಣ’, ‘ವೈಖರೀ ವಾಚಸ್ಪತಿ’, ‘ದಿ.ಎಂ.ಎ.ಹೆಗಡೆ ಯಕ್ಷಗಾನ ಪ್ರಸಂಗ ಸಮುಚ್ಚಯ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಹಾಸಣಗಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೊರ್ಸಗದ್ದೆ, ಪತ್ರಕರ್ತ ರಾಜಶೇಖರ ಜೋಗಿನ್ಮನೆ, ಸಾವಿತ್ರಿ ಹೆಗಡೆ, ಸಂಸ್ಮರಣೆ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಕಾರ್ಯದರ್ಶಿ ನಾಗರಾಜ ಜೋಶಿ ಇದ್ದರು. ದಿವಾಕರ ಕೆರೆಹೊಂಡ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.