ADVERTISEMENT

ಮುರುಡೇಶ್ವರದಲ್ಲಿ ಜೂಜು: 12 ಜನರ ಮೇಲೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 2:56 IST
Last Updated 19 ಡಿಸೆಂಬರ್ 2025, 2:56 IST
<div class="paragraphs"><p>ಬಂಧನ</p></div>

ಬಂಧನ

   

ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಉತ್ತರಕೊಪ್ಪ ರಸ್ತೆಯ ಕೀರ್ತಿ ಲಾಡ್ಜ್‌ ರೂಂ ಸಂ.206ರಲ್ಲಿ ಗುರುವಾರ ಮಧ್ಯಾಹ್ನ ಜೂಜಾಟ ಆಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಠಾಣಾ ಪೊಲೀಸರು ಎರಡು ಮೊಬೈಲ್‌ ವಶಪಡಿಸಿಕೊಂಡು 12 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮುರುಡೇಶ್ವರ ಗುಮ್ಮನಹಕ್ಲ ನಿವಾಸಿ ಸುಬ್ರಮಣ್ಯ ಜಟ್ಟ ನಾಯ್ಕ , ತೇರ್ನಮಕ್ಕಿ ನಿವಾಸಿಗಳಾದ ನಾರಾಯಣ ಮಂಜಪ್ಪ ನಾಯ್ಕ, ಮಹೇಶ ಗಣಪತಿ ನಾಯ್ಕ, ನಾಗರಾಜ ಮಂಜುನಾಥ ನಾಯ್ಕ, ಭಾಸ್ಕರ ಪರಮೇಶ್ವರ ನಾಯ್ಕ, ರೋಹಿದಾಸ ಮಂಜುನಾಥ ನಾಯ್ಕ, ರಾಜೇಶ ಮಾದೇವ ನಾಯ್ಕ, ಬಿದ್ರಮನೆ ಕಾಯ್ಕಿಣಿ ನಿವಾಸಿಗಳಾದ ಕೃಷ್ಣ ಮಂಜುನಾಥ ನಾಯ್ಕ, ರಮೇಶ ನಾಗಪ್ಪ ನಾಯ್ಕ , ಗೋಪಾಲ ನಾರಾಯಣ ನಾಯ್ಕ, ಹೆರಾಡಿ ನಿವಾಸಿ ಶ್ರೀನಿವಾಸ ಮಂಜುನಾಥ ನಾಯ್ಕ ಮತ್ತು ಕೀರ್ತಿ ಲಾಡ್ಕ್‌ ಮಾಲೀಕ ಆರೋಪಿಗಳಾಗಿದ್ದಾರೆ.

ADVERTISEMENT

ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.