ADVERTISEMENT

ಗೋಡ್ಸೆ ವೈಭವೀಕರಣ ಅಪಾಯಕಾರಿ: ಸಾಹಿತಿ ಶಾಂತಾರಾಮ ನಾಯಕ ಹಿಚಕಡ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:03 IST
Last Updated 31 ಜನವರಿ 2026, 7:03 IST
ಅಂಕೋಲಾ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಸಾಹಿತಿ ಶಾಂತಾರಾಮ ನಾಯಕ ಮಾಲಾರ್ಪಣೆ ಮಾಡಿದರು.
ಅಂಕೋಲಾ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಸಾಹಿತಿ ಶಾಂತಾರಾಮ ನಾಯಕ ಮಾಲಾರ್ಪಣೆ ಮಾಡಿದರು.   

ಅಂಕೋಲಾ: ‘ಗಾಂಧಿ ಹತ್ಯೆ ಮಾಡಿದ ಗೋಡ್ಸೆಗೆ ಇಂದು ದೇವಸ್ಥಾನ ಕಟ್ಟಿ ಪೂಜಿಸುವ ಮಟ್ಟಕ್ಕೆ ಬಂದಿದ್ದೇವೆ. ದೇಶ ಹೇಗೆ ಅಧಪತನದತ್ತ ಸಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.

ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಶುಕ್ರವಾರ ಹುತಾತ್ಮರ ದಿನವನ್ನು ಸೌಹಾರ್ದ ಸಂಕಲ್ಪ ದಿನವಾಗಿ ಆಚರಿಸಿದ ನಿಮಿತ್ತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಸಾಹಿತಿ ಮೋಹನ ಹಬ್ಬು ಮಾತನಾಡಿ, ಗಾಂಧೀಜಿ ಅವರ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ. ಗಾಂಧೀಜಿ ಅವರ ತತ್ವ ವಿಚಾರಗಳನ್ನು ಅರಿಯದೇ ಯಾರೋ ಹೇಳಿದ ಮಾತ್ರಕ್ಕೆ ಯುವ ಜನತೆ ಕೂಡ ಬಲಿಯಾಗುತ್ತಿರುವುದು ಆಘಾತಕಾರಿ ಎಂದರು.

ADVERTISEMENT

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿದರು.

ಕವಿ ಕೃಷ್ಣಾ ನಾಯಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹೋರಾಟಗಾರ್ತಿ ಯಮುನಾ ಗಾಂವಕರ ಮಾತನಾಡಿದರು. ಸಾಹಿತಿ ಡಾ.ಆರ್.ಜಿ.ಗುಂದಿ, ಜೆ.ಪ್ರೇಮಾನಂದ, ಗೌರೀಶ ನಾಯಕ, ಜಗದೀಶ ನಾಯಕ, ಸಂತೋಷ ನಾಯ್ಕ, ಉದಯ ನಾಯ್ಕ, ಗೀತಾ ಗೌಡ , ಪೂರ್ಣಿಮಾ ನಾಯ್ಕ, ವಿನೋದ ನಾಯ್ಕ, ಎಚ್.ಬಿ.ನಾಯಕ, ರಾಜಗೋಪಾಲ್ ಶೇಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.