
ಪ್ರಜಾವಾಣಿ ವಾರ್ತೆಸಾಂದರ್ಭಿಕ ಚಿತ್ರ
ಹೊನ್ನಾವರ: ತಾಲ್ಲೂಕಿನ ಪಡುಕುಳಿ ಶಿವಳ್ಳಿಕೇರಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳುವಾಗಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಮನೆಯ ಮಾಲೀಕ, ಶಿವಳ್ಳಿಕೇರಿಯ ಪ್ರಾನ್ಸಿಸ್ ಫಿಲೀಪ್ ಅಲ್ಮೇಡಾ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.
‘ಕಪಾಟಿನ ಬೀಗ ತೆಗೆದು ಅದರಲ್ಲಿಟ್ಟಿದ್ದ ₹10.95 ಲಕ್ಷ ಮೌಲ್ಯದ ಅಂದಾಜು 219 ಗ್ರಾಂ ಚಿನ್ನದ ಆಭರಣವನ್ನು ಕಳವು ಮಾಡಲಾಗಿದೆ. ನನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನ ಅಕ್ಕನ ಮಗ, ಶಿವಳ್ಳಿಕೇರಿ ನಿವಾಸಿ ರೋಹಿತಕುಮಾರ ರವಿಕುಮಾರ ಚಪ್ಪಡಿ ಮೇಲೆ ಸಂಶಯವಿದೆ’ ಎಂದು ಪ್ರಾನ್ಸಿಸ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.