ADVERTISEMENT

ತಪ್ಪು ಸರಿಪಡಿಸುವ ಕೆಲಸ ಆಗಲಿದೆ:ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:27 IST
Last Updated 13 ಆಗಸ್ಟ್ 2022, 16:27 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಶಿರಸಿ: ‘ವಕ್ಫ್ ಸಲಹಾ ಮಂಡಳಿಗೆ ಪದಾಧಿಕಾರಿಗಳನ್ನು ನೇಮಿಸುವಾಗ ಸಣ್ಣಪುಟ್ಟ ಲೋಪದೋಷ ಉಂಟಾಗಿದ್ದನ್ನು ಒಪ್ಪಿಕೊಂಡಿದ್ದೇವೆ. ತಪ್ಪು ಸರಿಪಡಿಸಿ ಪುನಃ ಅದು ಪುನರಾವರ್ತನೆ ಆಗದಂತೆ ಎಚ್ಚರದ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ವಕ್ಫ್ ಮಂಡಳಿಯಲ್ಲಿ ಬಿಜೆಪಿಗೆ ಬಹುಮತವಿಲ್ಲ. ಉಳಿದ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರ ಸಲಹೆ, ಅವರು ನೀಡಿದ ಪಟ್ಟಿ ಆಧರಿಸಿಯೂ ನೇಮಕಾತಿ ನಡೆಯುತ್ತದೆ. ಇದರಿಂದ ಕೆಲವು ದೋಷಗಳು ಉಂಟಾಗಿರಬಹುದು. ಅದು ಗಮನಕ್ಕೆ ಬಂದ ಕೂಡಲೆ ಆದೇಶ ತಡೆಹಿಡಿಯುವ ಕೆಲಸವಾಗಿದೆ’ ಎಂದರು.

‘ಬೆಳೆ ಹಾನಿಯ ಮಾಹಿತಿಯನ್ನು ವೆಬ್ ಪೋರ್ಟಲ್‍ಗೆ ದಾಖಲಿಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಅದನ್ನು ಸರಿಪಡಿಸಲಾಗಿದೆ’ ಎಂದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಸರ್ಕಾರ ಮತ್ತು ಪಕ್ಷ ಪರಸ್ಪರ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.